ಮೋದಿ ದಾಖಲೆ ಆಡಳಿತ: ಕೊಡವೂರು ದೇವಸ್ಥಾನದಲ್ಲಿ ವಿಶೇಷ ಪೂಜೆ

ಲೋಕಬಂಧು ನ್ಯೂಸ್ | ಉಡುಪಿ, ಜೂ.10
ಭಾರತದ ಇತಿಹಾಸದಲ್ಲಿ ಅತೀ ದೀರ್ಘ ಅವಧಿಯ ಚುನಾಯಿತ ಪ್ರಧಾನ ಮಂತ್ರಿಯಾಗಿ ಹೊಸ ಮೈಲಿಗಲ್ಲು ಸ್ಥಾಪಿಸಿದ ನರೇಂದ್ರ ಮೋದಿ ಅವರ ದಾಖಲೆ ಆಡಳಿತ ಮತ್ತು ಅವರ ದೇಶ ಸೇವೆಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ವಿಕಸಿತ ಭಾರತದ ಸಂಕಲ್ಪ ಸಿದ್ದಿಗಾಗಿ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಬುಧವಾರ ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಹಾಗೂ ಕೊಡವೂರು ವಾರ್ಡ್ ಬಿಜೆಪಿ ವತಿಯಿಂದ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶಪಾಲ್ ಸುವರ್ಣ, ಕಳೆದ 4,399 ದಿನಗಳಿಂದ ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದು, ವಿಕಸಿತ ಭಾರತ ನಿರ್ಮಾಣದ ಸಂಕಲ್ಪದ ಕನಸು ನನಸಾಗಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರಿಗೆ ದೇಶದ ಪ್ರತಿಯೋರ್ವ ನಾಗರಿಕರ ಸಹಕಾರದ ಜೊತೆಗೆ ದೈವ- ದೇವರ ಅನುಗ್ರಹ ದೊರೆಯಲಿ ಎಂದು ಹಾರೈಸಿದರು.


ಈ ಸಂದರ್ಭದಲ್ಲಿ ಉಡುಪಿ ಬಿಜೆಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಪ್ರಮುಖರಾದ ವಿಜಯ ಕೊಡವೂರು, ರವಿರಾಜ್ ಹೆಗ್ಡೆ, ನಾರಾಯಣ ಬಲ್ಲಾಳ್, ಸುಧಾಕರ್ ಎ. ಕುಂದರ್, ಪ್ರಭಾತ್ ಕೊಡವೂರು, ಲಕ್ಷ್ಮೇಶ್ ಬಂಗೇರ, ವಿನಯ ಕುಮಾರ್ ಪಡುಕರೆ, ರಮೇಶ್ ಮಾಸ್ತರ್, ಪ್ರದೀಪ್ ಕುಂದರ್, ಚಂದ್ರಕಾಂತ್ ಶೆಟ್ಟಿಗಾರ್, ಸದಾನಂದ ಶೇರಿಗಾರ್, ಮಹಿಳಾ ಮೋರ್ಚಾದ ಪ್ರಮುಖರಾದ ಸುಲತಾ ಶೆಟ್ಟಿ, ಕೀರ್ತಿ ವಿಜಯ್, ಯಶೋದಾ ರಾಜೇಂದ್ರ, ದೀಪಾ ಪೈ, ಗುಣವತಿ, ಚಂದ್ರಾವತಿ, ಮಾಯಾ ಕಾಮತ್, ತ್ರಿವೇಣಿ, ಸುಜಾತ, ನೀತಾ, ಸುಭದ್ರ ಮೊದಲಾದವರಿದ್ದರು.