ಲೋಕಬಂಧು ನ್ಯೂಸ್ | ಉಡುಪಿ, ಮೇ 24
ಮಕ್ಕಳ ಸಹಿತ ದೊಡ್ಡವರು ಕೂಡಾ ಮೊಬೈಲ್'ನ್ನು ಮಿತ ಹಿತವಾಗಿ ಬಳಸಬೇಕೇ ಹೊರತು ದಾಸರಾಗಬಾರದು ಎಂದು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸಲಹೆ ನೀಡಿದ್ದಾರೆ.
ಪುತ್ತಿಗೆ ಮಠದ ವತಿಯಿಂದ ಹಿರಿಯಡ್ಕದ ಪುತ್ತಿಗೆ ಮೂಲಮಠದಲ್ಲಿ ನಡೆದ ಮೊಬೈಲ್ ವರ್ಜನ ಶಿಬಿರವನ್ನು ಉಡುಪಿ ಗೀತಾ ಮಂದಿರದ ಸುಗುಣಮಾಲಾ ಸಭಾಂಗಣದಲ್ಲಿ ಉದ್ಘಾಟಿಸಿದರು.
ಮಕ್ಕಳ ಮೊಬೈಲ್ ವ್ಯಸನದಿಂದ ಸಮಾಜ, ಸರಕಾರವೂ ಚಿಂತಿತವಾಗಿದೆ. ಮೊಬೈಲ್ ಬೇಕು, ಆದರೆ ಚಟದ ಪರಿತ್ಯಾಗ ಮಾಡಬೇಕು. ಮೊಬೈಲ್ ಇಲ್ಲದಿದ್ದರೆ ಬದುಕೇ ಇಲ್ಲವೆನ್ನುವ, ಜೀವ ಕಳೆದುಕೊಳ್ಳುವ ಪರಿಸ್ಥಿತಿ ಬರಬಾರದು. 16 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯ ನಿರ್ಬಂಧ ಚಿಂತನೆಗೆ ಸಮಾಜವೂ ಸ್ಪಂದಿಸಬೇಕು. ಪ್ರಧಾನಿ ಮೋದಿ ದೇಶದ ಜನತೆಗೆ ನೀಡಿದ ಮಿತ ಬಳಕೆಯ ಸೂತ್ರ ಮೊಬೈಲ್'ಗೂ ಅನ್ವಯ.
ಮುಂದಿನ ವರ್ಷ ಹೆತ್ತವರಿಗೂ ಮೊಬೈಲ್ ವರ್ಜನ ಶಿಬಿರವನ್ನು ಬೇರೆ ಬೇರೆ ಕಡೆಗಳಲ್ಲಿ ಆಯೋಜಿಸಲಾಗುವುದು.ಯೋಗಕೃಷ್ಣನ ನಾಡಿನಿಂದ ಮೊಬೈಲ್ ಸಂಯಮ ಯೋಗ ಸಂದೇಶ ಜಗತ್ತಿಗೆ ಪಸರಿಸಲಿ ಎಂದರು.
ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವ್ಯಾಸರಾಜ ತಂತ್ರಿ, ನಿಟ್ಟೆ ವಿ.ವಿ.ಯ ಪ್ರೊ. ಸುಧೀರ್ ರಾಜ್, ಡಾ. ರಾಮನಾಥ ಆಚಾರ್ಯ, ಪತಂಜಲಿ ಯೋಗ ಪೀಠದ ಭವರ್ ಲಾಲ್ ಆರ್ಯ, ಮುಂಬಯಿ ಉದ್ಯಮಿ ಸಂತೋಷ್ ಮುಳುಂದ್ ಇದ್ದರು.
