ಪ್ರೊ.ಕೃಷ್ಣಪ್ಪ ಜಯಂತಿ ಆಚರಣೆ

ಲೋಕಬಂಧು ನ್ಯೂಸ್ | ಉಡುಪಿ, ಜೂ.10
ದಲಿತ ಸಂಘರ್ಷ ಸಮಿತಿ (ದಸಂಸ) ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರ ಜಯಂತಿಯನ್ನು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದಿರುವ ಅಂಬೇಡ್ಕರ್ ಪ್ರತಿಮೆ ಎದುರು ಆಚರಿಸಲಾಯಿತು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಮತ್ತು ಕೃಷ್ಣಪ್ಪ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಗೌರವ ಸಲ್ಲಿಸಿ, ಪ್ರೊ.ಬಿ.ಕೆ.ಯವರ ಜೀವನ- ಸಾಧನೆ ಬಗ್ಗೆ ತಿಳಿಸಿದರು. ಕೃಷ್ಣಪ್ಪ ಅವರು ತೋರಿದ ಮಾರ್ಗದಲ್ಲಿ ನಾವೆಲ್ಲಾ ನಡೆಯಬೇಕು ಎಂದರು.


ಮುಖ್ಯ ಅತಿಥಿಯಾಗಿದ್ದ ದಸಂಸ ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಮಾತನಾಡಿ ಪ್ರೊ.ಬಿ.ಕೆ. ಅವರು ಉಡುಪಿ ಜಿಲ್ಲೆಯೊಂದಿಗೆ ಹೊಂದಿದ್ದ ಭಾವನಾತ್ಮಕ ಸಂಬಂಧದ ಬಗ್ಗೆ ತಿಳಿಸಿದರು.


ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಜಿಲ್ಲಾ ಸಂಘಟನಾ ಸಂಚಾಲಕರಾದ ಮಂಜುನಾಥ ನಾಗೂರು, ಸುರೇಶ್ ಹಕ್ಲಾಡಿ ಮತ್ತು ಭಾಸ್ಕರ್ ನಿಟ್ಟೂರು, ಜಿಲ್ಲಾ ಮಹಿಳಾ ಒಕ್ಕೂಟದ ಗೀತಾ ಸುರೇಶ್, ವಿನಯ ಮಾಸ್ತಿಕಟ್ಟೆ, ತಾಲೂಕು ಸಂಚಾಲಕರಾದ ಶ್ಯಾಮಸುಂದರ್ ತೆಕ್ಕಟ್ಟೆ, ಕೆ.ಸಿ. ರಾಜು. ಬೆಟ್ಟಿನಮನೆ ಮತ್ತು ಶಿವರಾಜ್ ಬೈಂದೂರು, ಜಿಲ್ಲಾ ಸಮಿತಿಯ ಸುರೇಶ್ ಬಾರ್ಕೂರ್, ಕುಮಾರ್ ಕೋಟ, ಹರಿಶ್ಚಂದ್ರ ಕೆ., ಡಿ.ಪ್ರವೀಣ್ ಗುಂಡಿಬೈಲು, ಗುಣವಂತ ಬೈರಂಪಳ್ಳಿ, ಮುದ್ದಣ್ಣ, ಕೃಷ್ಣ ಬೆಳ್ಳೆ, ಹರೀಶ್ ಕಲ್ಯಾ, ರಮೇಶ್ ಉಪಸ್ಥಿತರಿದ್ದರು.


ಪ್ರಶಾಂತ್ ಬಿರ್ತಿ ಹೋರಾಟದ ಹಾಡು ಹಾಡಿದರು.