ಲೋಕಬಂಧು ನ್ಯೂಸ್ ಉಡುಪಿ, ಜು.25
ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ಆಷಾಢ ಏಕಾದಶಿಯಂದು ಶನಿವಾರ ತಪ್ತ ಮುದ್ರಾಧಾರಣೆ ನಡೆಯಿತು.ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಮೊದಲಿಗೆ ಸ್ವತಃ ಮುದ್ರಾಧಾರಣೆ ಮಾಡಿಕೊಂಡು, ಬಳಿಕ ನೆರೆದ ಭಕ್ತಾದಿಗಳಿಗೆ ಮುದ್ರಾಧಾರಣೆ ಮಾಡಿಸಿದರು.
ಆಬಾಲವೃದ್ಧರಾದಿಯಾಗಿ ಅನೇಕ ಮಂದಿ ಸ್ತ್ರೀ-ಪುರುಷ ಭಕ್ತರು ಶ್ರೀಗಳಿಂದ ತಪ್ತ ಮುದ್ರಾಧಾರಣೆ ಮಾಡಿಸಿಕೊಂಡರು.
ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ, ಪಾರುಪತ್ಯೆಗಾರ ಶ್ರೀಶ ಭಟ್ ಕಡೆಕಾರ್ ಮೊದಲಾದವರಿದ್ದರು.
ವೈಷ್ಣವ ಸಂಪ್ರದಾಯಂತೆ ಸುದರ್ಶನ ಹೋಮದ ಅಗ್ನಿಯಲ್ಲಿ ಹೋಮಿಸಿದ ಲೋಹದ ಶಂಖ- ಚಕ್ರಾಂಕಿತಗಳ ಮುದ್ರೆಗಳನ್ನು ಒತ್ತಿಸಲಾಗುತ್ತದೆ.