ಲೋಕಬಂಧು ನ್ಯೂಸ್ ಉಡುಪಿ, ಜು.20
ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆಯ ಕನ್ನಡ ವೈದ್ಯ ಬರಹಗಾರರ ಸಮಿತಿ ನೀಡುವ ಪ್ರತಿಷ್ಠಿತ ಡಾ.ಶ್ಯಾಮ್ ಪ್ರಸಾದ್ ವಾರ್ಷಿಕ ಶ್ರೇಷ್ಠ ವೈದ್ಯಕೀಯ ಕೃತಿ ಪ್ರಶಸ್ತಿಗೆ ಉಡುಪಿಯ ವೈದ್ಯಕೀಯ ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಡಾ.ರಾಜಲಕ್ಷ್ಮಿ ಅವರ 'ವಾತ್ಸಲ್ಯದ ಒಸಗೆ' ಮಹಿಳಾ ಆರೋಗ್ಯ ಸಂಗಾತಿ ಕೃತಿ ಆಯ್ಕೆಯಾಗಿದೆ.ಭಾರತೀಯ ವೈದ್ಯಕೀಯ ಸಂಘ ಉಡುಪಿ- ಕರಾವಳಿಯ ಪೂರ್ವಾಧ್ಯಕ್ಷೆ, ವಾತ್ಸಲ್ಯ ಕ್ಲಿನಿಕ್'ನ ಡಾ.ರಾಜಲಕ್ಷ್ಮಿ ಅವರು ರೋಗಿಗಳ ಬದುಕು, ಭಾವನೆ ಮತ್ತು ಮಾನವೀಯ ಸಂಬಂಧಗಳ ಕುರಿತಂತೆ ಬರೆದಿರುವ ಈ ಕೃತಿ ಓದುಗರ ಮನಮುಟ್ಟುವಂತಿದೆ.
ಆಗಸ್ಟ್ 23 ಮತ್ತು 24ರಂದು ದೊಡ್ಡಬಳ್ಳಾಪುರದ ನವೋದಯ ಶಾಲೆಯಲ್ಲಿ ನಡೆಯುವ ಕನ್ನಡ ವೈದ್ಯ ಬರಹಗಾರರ 6ನೇ ರಾಜ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪದ್ಮಶ್ರೀ ಡಾ.ಸುರೇಶ್ ಹನಗವಾಡಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.