ನಾಗಬನ ಮರಳು ಶಿಲ್ಪ‌ ರಚನೆ

ಲೋಕಬಂಧು ನ್ಯೂಸ್ | ಕುಂದಾಪುರ, ಆ‌.16
ಕರಾವಳಿ ಸಹಿತ ನಾಡಿನಾದ್ಯಂತ ಭಯ, ಭಕ್ತಿ ಮತ್ತು ಶ್ರದ್ಧೆಯ ನಾಗರ ಪಂಚಮಿ ಹಬ್ಬ ಹಿನ್ನೆಲೆಯಲ್ಲಿ ಪ್ರಕೃತಿ-ನಾಗದೇವರ ಕಲ್ಪನೆಯಡಿ ರಚನೆಗೊಂಡ ನಾಗಬನ ಶೀರ್ಷಿಕೆಯಡಿ ಕುಂದಾಪುರದ ತ್ರಿವರ್ಣ ಆರ್ಟ್ಸ್ ಕ್ಲಾಸಸ್ ವಿದ್ಯಾರ್ಥಿಗಳು ಭಾನುವಾರ ಕೋಟೇಶ್ವರದ ಹಳೆ ಅಳಿವೆ ಕಡಲ ಕಿನಾರೆಯಲ್ಲಿ ಮರಳು ಶಿಲ್ಪಾಕೃತಿ ರಚಿಸಿ ಸಾರ್ವಜನಿಕರ ಗಮನ ಸೆಳೆದರು.
ಕಲಾ ವಿದ್ಯಾರ್ಥಿಗಳಾದ ಅದ್ವಿತ್ ಶಂಕರ್, ಸಾತ್ವಿಕ್ ಕೆ.ಆರ್., ಪ್ರಣತಿ ಪ್ರಶಾಂತ್ ಭಟ್, ಸಮನ್ವಿ, ಅದ್ವಿತ್ ಕುಮಾರ್ ಆರ್. ಸುನೇರಿ ಹೆಗ್ಡೆ, ವಿದ್ಯಾರಾಣಿ‌‌ ಅವರು ಕೇಂದ್ರದ ಮಾರ್ಗದರ್ಶಕ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ 12 ಅಡಿ ಅಗಲ ಮತ್ತು ವಿಸ್ತೀರ್ಣದಲ್ಲಿ ಕಲಾಕೃತಿ ರಚಿಸಿದರು.