ಹಿಂದಿಭಾಷೆಯಲ್ಲಿ ಹರಿಕಥಾ ಸತ್ಸಂಗ

ಲೋಕಬಂಧು ನ್ಯೂಸ್ | ನವದೆಹಲಿ, ಆ.31
ಪೇಜಾವರ ಶಾಖಾಮಠ ವೇದವ್ಯಾಸ ಗುರುಕುಲದಲ್ಲಿ ಚಾತುರ್ಮಾಸ್ಯ ವ್ರತನಿಷ್ಠರಾಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ದಿವ್ಯೋಪಸ್ಥಿತಿಯಲ್ಲಿ ಹಂಡೆದಾಸ ಪ್ರತಿಷ್ಠಾನ ಉಡುಪಿ ಸಹಯೋಗದೊಂದಿಗೆ ವಿದ್ವಾನ್ ರಾಮಕೃಷ್ಣ ಕೊಡಂಚ ಉಡುಪಿ ಅವರಿಂದ ಹಿಂದಿ ಭಾಷೆಯಲ್ಲಿ ಹರಿಕಥಾ ಸತ್ಸಂಗ ನೆರವೇರಿತು.
ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಪ್ರತಿಷ್ಠಾನದ ನಿರ್ದೇಶಕಿ ರುಕ್ಮಿಣಿ ಹಂಡೆ ಉಪಸ್ಥಿತರಿದ್ದರು.