ಲೋಕಬಂಧು ನ್ಯೂಸ್ ನವದೆಹಲಿ, ಆ.1
ಭಾಷಣದ ಬಳಿಕ ವೇದಿಕೆ 'ಶುದ್ಧೀಕರಣ'ದಂಥ ಘಟನೆಗಳನ್ನು ಬಿಜೆಪಿ ಸಹಿಸದು ಎಂದು ರಾಜ್ಯಸಭೆ ಸದನ ನಾಯಕ ಹಾಗೂ ಕೇಂದ್ರ ಸಚಿವ ಜೆ.ಪಿ. ನಡ್ಡಾ ಹೇಳಿದರು.
ಖರ್ಗೆ ಭಾಷಣದ ಬಳಿಕ ವರದಿಯಾಗಿರುವ ಘಟನೆ ವಿಷಾದನೀಯವಾಗಿದ್ದು, ಬಿಜೆಪಿ ಇಂಥ ಯಾವುದೇ ಚಟುವಟಿಕೆಗಳನ್ನು ಬೆಂಬಲಿಸುವುದಿಲ್ಲ. ಘಟನೆ ನಿಜವಾಗಿದ್ದರೆ ಅದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ ಅವರು, ನಾನು ಈ ಘಟನೆಯನ್ನು ಖಂಡಿಸುವುದಾಗಿ ಸದನದಲ್ಲಿ ಸ್ಪಷ್ಪಪಡಿಸಿದರು.