ಲೋಕಬಂಧು ನ್ಯೂಸ್ | ಉಡುಪಿ, ಸೆ.2
ಪರ್ಯಾಯ ಶೀರೂರು ಮಠ ಶ್ರೀಕೃಷ್ಣ ಮಠ ಆಶ್ರಯದಲ್ಲಿ ನಡೆಯುತ್ತಿರುವ ಜಗದೊಡೆಯನ ಜನ್ಮಾಷ್ಟಮಿ ಸಂಭ್ರಮದ ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಸೆಪ್ಟೆಂಬರ್ 3ರಂದು ಖ್ಯಾತ ಹಿಂದೂಸ್ಥಾನಿ ಗಾಯಕಿ ಕೌಶಿಕಿ ಚಕ್ರವರ್ತಿ ಅವರ ಸಂಗೀತ ಕಛೇರಿ ನಡೆಯಲಿದೆ.
ಕೌಶಿಕಿ ಚಕ್ರವರ್ತಿ ಅವರು ಅನೇಕ ಪ್ರಮುಖ ಸಂಗೀತ ಕಛೇರಿಗಳಲ್ಲಿ ಭಾಗವಹಿಸಿದ್ದಾರೆ. ಖಯಾಲ್'ಗಳನ್ನು ಪ್ರಸ್ತುತಪಡಿಸುವ ಜೊತೆಗೆ ಸಾಂದರ್ಭಿಕವಾಗಿ ಭಾರತೀಯ ಪಾಪ್ ಸಂಗೀತದ ಸಮಕಾಲೀನ ರೂಪವನ್ನೂ ಅಳವಡಿಸಿಕೊಂಡಿದ್ದಾರೆ.
