ಲೋಕಬಂಧು ನ್ಯೂಸ್ | ಉಡುಪಿ, ಸೆ.4
ಪರ್ಯಾಯ ಶೀರೂರು ಮಠ ಆಶ್ರಯದಲ್ಲಿ ಶ್ರಾವಣ ಕೃಷ್ಣಪಕ್ಷದ ಅಷ್ಟಮಿ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಮೊದಲ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವೈಭವದಿಂದ ಆಚರಿಸಲಾಗುತ್ತಿದ್ದು, ದಿನವಿಡೀ ಭಕ್ತಿಯ ವಾತಾವರಣ ಮನೆ ಮಾಡಿತ್ತು.
ಊರು- ಪರವೂರುಗಳಿಂದ ಆಗಮಿಸಿದ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ಬೆಳಗ್ಗಿನಿಂದಲೇ ಸರದಿಯ ಸಾಲಿನಲ್ಲಿ ನಿಂತು ಕೃಷ್ಣ ದರ್ಶನ ಮಾಡಿದರು. ಮಳೆ ಇಲ್ಲದ ಕಾರಣ ಭಕ್ತಾದಿಗಳಿಗೆ ಯಾವುದೇ ರೀತಿಯ ಅಡಚಣೆ ಆಗಿರಲಿಲ್ಲ. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಮಾಡಿತ್ತು.
ಆಕರ್ಷಕ ಪುಷ್ಪಾಲಂಕಾರ
ವಿಶೇಷ ಅಲಂಕಾರ
ಶುಕ್ರವಾರ ಉಡುಪಿ ಕೃಷ್ಣನಿಗೆ ಸ್ತ್ರೀರೂಪದ ಅಲಂಕಾರ ಪದ್ಧತಿ. ಹಾಗಾಗಿ ಜನ್ಮಾಷ್ಟಮಿ ಅಂಗವಾಗಿ ಶೀರೂರು ಶ್ರೀಪಾದರು ಕೃಷ್ಣನಿಗೆ ಯಶೋದೆಯ ಅಲಂಕಾರ ಮಾಡಿದ್ದರು.
ವಿಶೇಷ ಪೂಜೆ
ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಮಠದಲ್ಲಿ ವಿಶೇಷ ಪೂಜೆ, ಭಜನೆ, ಸಂಕೀರ್ತನೆ ನಡೆಯಿತು. ವೇದಘೋಷ ಮೊಳಗುತ್ತಿತ್ತು. ಆಬಾಲವೃದ್ಧ ಸ್ತ್ರೀ-ಪುರುಷರು ಸಂಕೀರ್ತನೆಯಲ್ಲಿ ಭಾಗವಹಿಸಿದ್ದು, ಭಕ್ತಿಯ ವಾತಾವರಣ ಮನೆಮಾಡಿತ್ತು.
ಉಂಡೆ ಕಟ್ಟಲು ಮುಹೂರ್ತ
ಬೆಳಗ್ಗಿನ ಮಹಾಪೂಜೆ ನಡೆಸಿದ ಶ್ರೀಪಾದರು ರಾತ್ರಿ ಪೂಜೆಗಾಗಿ ಉಂಡೆ ಕಟ್ಟುವ ಮುಹೂರ್ತ ನಡೆಸಿದರು. ಪರ್ಯಾಯ ಶೀರೂರು ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ, ಪಾರುಪತ್ಯೆಗಾರ ಶ್ರೀಶ ಭಟ್ ಕಡೆಕಾರು ಸೇರಿದಂತೆ ಭಕ್ತಾದಿಗಳು ಲಡ್ಡುಕೆ (ಉಂಡೆ) ಕಟ್ಟುವ ಸೇವೆಯಲ್ಲಿ ಭಾಗವಹಿಸಿದ್ದರು.
ಮುದ್ದುಕೃಷ್ಣ ಸ್ಪರ್ಧೆ
ರಾಜಾಂಗಣದಲ್ಲಿ ಮಕ್ಕಳಿಗಾಗಿ ಮುದ್ದುಕೃಷ್ಣ ಸ್ಪರ್ಧೆ, ಯಶೋದಾ ಕೃಷ್ಣ ಸ್ಪರ್ಧೆ ನಡೆಯಿತು. ಹುಲಿವೇಷ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು.
ಮಧ್ಯರಾತ್ರಿ ಕೃಷ್ಣಾರ್ಘ್ಯ
ಸಂಜೆ ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿಪೂಜೆ ನಡೆದು ಮಧ್ಯರಾತ್ರಿ 12.12 ಗಂಟೆಗೆ ಶ್ರೀಕೃಷ್ಣ ಅರ್ಘ್ಯ ಪ್ರದಾನ ನಡೆಯಲಿದೆ.
ತರಕಾರಿ ಮುಹೂರ್ತ
.jpg)
.jpg)
.jpg)
.jpg)

.jpg)
.jpg)
.jpg)
.jpg)
.jpg)