ಲೋಕಬಂಧು ನ್ಯೂಸ್ | ಉಡುಪಿ, ಸೆ.2
ಪರ್ಯಾಯ ಶೀರೂರು ಮಠ ಆಶ್ರಯದಲ್ಲಿ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಮುನಿಯಾಲು ಸಹಕಾರದೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಕುರಿತ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ ಕಲರ್ಸ್ ಆಫ್ ಶ್ರೀಕೃಷ್ಣ ಆಯೋಜಿಸಲಾಗಿದೆ.
ಉಡುಪಿ ಶ್ರೀಕೃಷ್ಣ ಮಠದ ಪರಿಸರದಲ್ಲಿ ನಡೆಯುವ ಈ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಸೆ.4 ಮತ್ತು 5ರಂದು ನಡೆಯುವ ವಿಟ್ಲಪಿಂಡಿ ಮಹೋತ್ಸವದ ಛಾಯಾಚಿತ್ರಗಳಿಗೆ ಮಾತ್ರ ಅವಕಾಶ. ಸ್ಪರ್ಧೆಗೆ ಗರಿಷ್ಠ ನಾಲ್ಕು ಛಾಯಾಚಿತ್ರಗಳನ್ನು ಕಳುಹಿಸಬಹುದು.
ಮೊಬೈಲ್'ನಲ್ಲಿ ತೆಗೆದ ಛಾಯಾಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಪೋಟೋಶಾಪ್'ನಲ್ಲಿ ವಿನ್ಯಾಸಗೊಳಿಸಿದ ಮತ್ತು ವಾಟರ್ ಮಾರ್ಕ್ ಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
ಪ್ರಥಮ 10 ಸಾವಿರ, ದ್ವಿತೀಯ 5 ಸಾವಿರ ಹಾಗೂ ತೃತೀಯ 3 ಸಾವಿರ ನಗದು ಬಹುಮಾನ ಮತ್ತು 5 ಸಮಾಧಾನಕರ ಬಹುಮಾನ, ಅಭಿನಂದನಪತ್ರ, ಸ್ಮರಣಿಕೆ ನೀಡಲಾಗುವುದು.
ಛಾಯಾಚಿತ್ರಗಳನ್ನು ಸೆ.15ರೊಳಗೆ ಕಳಿಸಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ 9448252363ನ್ನು ಸಂಪರ್ಕಿಸಬಹುದು.
ಛಾಯಾಚಿತ್ರ ಸ್ಪರ್ಧೆಯ ಪ್ರಚಾರ ಬಿತ್ತಿಪತ್ರವನ್ನು ಪರ್ಯಾಯ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು. ಎಸ್.ಕೆಪಿಎ ಉಡುಪಿ ವಲಯ ಅಧ್ಯಕ್ಷ ದಿವಾಕರ ಹಿರಿಯಡ್ಕ, ಮಾಜಿ ಅಧ್ಯಕ್ಷ ಜನಾರ್ದನ್ ಕೊಡವೂರು, ಸದಸ್ಯರಾದ ರತನ್ ಶೆಟ್ಟಿ, ಶ್ರೀಶ ಬಲ್ಲಾಳ್ ಹಾಗೂ ಶ್ರೀಮಠದ ಛಾಯಾಗ್ರಾಹಕ ಕೃತಿಕ್ ಭಟ್ ಉಪಸ್ಥಿತರಿದ್ದರು.
