ಜನ್ಮಾಷ್ಟಮಿ- ವಿಟ್ಲಪಿಂಡಿ: ಬಿಗಿ ಬಂದೋಬಸ್ತ್

ಲೋಕಬಂಧು ನ್ಯೂಸ್ | ಉಡುಪಿ, ಸೆ.3
ಕೃಷ್ಣಮಠದಲ್ಲಿ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸವ    ಹಿನ್ನೆಲೆಯಲ್ಲಿ ಭಕ್ತಾದಿಗಳ ಸುರಕ್ಷತೆ, ಕಾನೂನು ಸುವ್ಯವಸ್ಥೆ ಹಾಗೂ ಸುಗಮ ಸಂಚಾರ ನಿರ್ವಹಣೆಗಾಗಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ಕೈಗೊಂಡಿದೆ.ಉತ್ಸವದ ಭದ್ರತೆಗಾಗಿ ಒಬ್ಬರು ಎಸ್.ಪಿ, ಒಬ್ಬರು ಹೆಚ್ಚುವರಿ ಎಸ್.ಪಿ, 2 ಡಿವೈಎಸ್.ಪಿ., 6 ಇನ್ಸ್‌ಪೆಕ್ಟರ್, 25 ಪಿಎಸ್ಐ, 35 ಎಎಸ್ಐ ಸೇರಿದಂತೆ 186 ಪೊಲೀಸ್ ಸಿಬ್ಬಂದಿ ಹಾಗೂ 50 ಗೃಹರಕ್ಷಕರನ್ನು ನಿಯೋಜಿಸಲಾಗಿದೆ.


ಹೆಚ್ಚುವರಿ ಸುರಕ್ಷತೆಗಾಗಿ 1 ಕೆಎಸ್ಆರ್.ಪಿ. ತುಕಡಿ, 9 ಡಿಎಆರ್ ತುಕಡಿ, 3 ಅಗ್ನಿಶಾಮಕ ಪಡೆ, 2 ಆಂಬ್ಯುಲೆನ್ಸ್ ಹಾಗೂ 3‌ ಡ್ರೋನ್ ತಂಡಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಎಸ್.ಪಿ. ಹರಿರಾಮ್ ಶಂಕರ್ ತಿಳಿಸಿದ್ದಾರೆ.


ನಿಗದಿತ ಸ್ಥಳಗಳಲ್ಲಿ ವಾಹನ ಪಾರ್ಕಿಂಗ್ ಸ್ಥಳ ಗುರುತಿಸಲಾಗಿದೆ.