ಲೋಕಬಂಧು ನ್ಯೂಸ್ ಉಡುಪಿ, ಸೆ.4
ಪರ್ಯಾಯ ಶೀರೂರು ಶ್ರೀಕೃಷ್ಣ ಮಠ ಆಶ್ರಯದಲ್ಲಿ ನಡೆಯುತ್ತಿರುವ ಜಗದೊಡೆಯನ ಜನ್ಮಾಷ್ಟಮಿ ಸಂಭ್ರಮದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸೆ.3ರಂದು ಗುರುವಾರ ರಾಜಾಂಗಣದಲ್ಲಿ ನಡೆದ ಕೌಶಿಕಿ ಚಕ್ರವರ್ತಿ ಅವರ ಹಿಂದೂಸ್ತಾನಿ ಸಂಗೀತ ಕಛೇರಿ ಜನಮನ ರಂಜಿಸಿತು.ಪಕ್ಕವಾದ್ಯದಲ್ಲಿ ಹಾರ್ಮೋನಿಯಮ್ ವ್ಯಾಸಮೂರ್ತಿ ಕಟ್ಟಿ, ತಬಲಾ ಓಜಸ್ ಅಧಿಯಾ, ಸಾರಂಗಿ ಮುರಾದ್ ಅಲಿ ಸಹಕರಿಸಿದರು.ಕಾರ್ಯಕ್ರಮ ವೀಕ್ಷಿಸಿದ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಕಲಾವಿದರನ್ನು ಗೌರವಿಸಿದರು.ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ ಇದ್ದರು.