ಸೆ.6ರಂದು ಕೋಟಿ ತುಳಸಿ ಅರ್ಚನೆ

ಲೋಕಬಂಧು ನ್ಯೂಸ್ ಉಡುಪಿ, ಸೆ.3
ಪರ್ಯಾಯ ಶೀರೂರು ಶ್ರೀಕೃಷ್ಣ ಮಠ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸೆಪ್ಟೆಂಬರ್ 6ರಂದು ಶ್ರೀಕೃಷ್ಣ ಮಠ ರಾಜಾಂಗಣದಲ್ಲಿ ಕೋಟಿ ತುಳಸಿ ಅರ್ಚನೆ ನಡೆಯಲಿದೆ.ವಿಪ್ರಬಾಂಧವರ ಸಹಯೋಗದಲ್ಲಿ ನಡೆಯುವ ಈ ಕೋಟಿ ತುಳಸಿ ಅರ್ಚನೆಯಲ್ಲಿ ಭಗವಂತನಿಗೆ ಸಮರ್ಪಿಸಲು ತುಳಸಿ, ಹೂವುಗಳನ್ನು ತರಬಹುದು ಎಂದು ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ ತಿಳಿಸಿದ್ದಾರೆ.