ವಿಟ್ಲಪಿಂಡಿ ಪ್ರಯುಕ್ತ ರಾಜ್ಯ ಮಟ್ಟದ ರೀಲ್ಸ್ ಸ್ಪರ್ಧೆ

ಲೋಕಬಂಧು ನ್ಯೂಸ್ | ಉಡುಪಿ, ಸೆ.3
ಪರ್ಯಾಯ ಶೀರೂರು ಶ್ರೀಕೃಷ್ಣ ಮಠ ಆಶ್ರಯದಲ್ಲಿ ಉಡುಪಿಗೆ ಬನ್ನಿ ನೇತೃತ್ವದಲ್ಲಿ ಎನ್.ಎನ್.ಇನ್'ಫ್ರಾಸ್ಟ್ರಕ್ಚರ್ ಡೆವಲಪರ್ಸ್, ಚಿತ್ರಕೂಟ ಆಯುರ್ವೇದ ಮತ್ತು ಅನಂತ ವೈದಿಕ ಕೇಂದ್ರ ಉಡುಪಿ ಸಹಕಾರದೊಂದಿಗೆ ವಿಟ್ಲಪಿಂಡಿ ಪ್ರಯುಕ್ತ 'ಕೃಷ್ಣ ರಂಗ' ರಾಜ್ಯ ಮಟ್ಟದ ರೀಲ್ಸ್ ಸ್ಪರ್ಧೆ ಆಯೋಜಿಸಲಾಗಿದ್ದು ಸ್ಪರ್ಧೆಯ ಪೋಸ್ಟರ್'ನ್ನು ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿ ಸ್ಪರ್ಧೆ ಯಶಸ್ವಿಯಾಗಿ ನಡೆಯಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ 'ಉಡುಪಿಗೆ ಬನ್ನಿ' ನಿರ್ವಾಹಕ ಡಾ.ಗಣೇಶ್ ಪ್ರಸಾದ್ ಜಿ. ನಾಯಕ್, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ವಿಭಾಗೀಯ ಅಧ್ಯಕ್ಷ ಉದಯ ನಾಯ್ಕ್ ಮೊದಲಾದವರಿದ್ದರು.


ಸ್ಪರ್ಧೆಯ ವಿವರ
ಸ್ಪರ್ಧಿಗಳು ಸೆಪ್ಟೆಂಬರ್ 5ರಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯುವ ವಿಟ್ಲಪಿಂಡಿಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಆಯ್ದ ಅಂಶಗಳನ್ನು ರೀಲ್ಸ್'ನಲ್ಲಿ ಪ್ರಸ್ತುತಪಡಿಸಬೇಕು. ರೀಲ್ಸ್'ನ್ನು ಇನ್ಸ್ಟಾಗ್ರಾಮ್'ನಲ್ಲಿ ಪ್ರಕಟಿಸಿ 'ಉಡುಪಿಗೆ ಬನ್ನಿ' ಕೊಲೇಬೊರೇಟ್ ಮಾಡಬೇಕು. ರೀಲ್ಸ್ ಕಳುಹಿಸಲು ಸೆ.15 ಕೊನೆಯ ದಿನವಾಗಿದ್ದು ಫಲಿತಾಂಶವನ್ನು ಸೆ.19ರಂದು ಪ್ರಕಟಿಸಲಾಗುವುದು.


ಪ್ರಥಮ ಬಹುಮಾನ 10 ಸಾವಿರ ರೂ. ಮತ್ತು ಪ್ರಶಸ್ತಿ ಪತ್ರ, ದ್ವಿತೀಯ ಬಹುಮಾನ 5 ಸಾವಿರ ಮತ್ತು ಪ್ರಶಸ್ತಿ ಪತ್ರ ಮತ್ತು 5 ಮಂದಿಗೆ ತಲಾ ರೂ. ಒಂದು ಸಾವಿರ ಸಮಾಧಾನಕರ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.


ಸ್ಪರ್ಧಿಸಿದ ಪ್ರತಿಯೊಬ್ಬರಿಗೂ ಪಾರ್ಟಿಸಿಪೇಶನ್ ಸರ್ಟಿಫಿಕೇಟ್ ನೀಡಲಾಗುವುದು. ಸ್ಪರ್ಧೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು 'ಉಡುಪಿಗೆ ಬನ್ನಿ' ಇನ್ಸ್ಟಾಗ್ರಾಮ್ ಪೇಜ್'ನಲ್ಲಿ ನೋಡಬಹುದು ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.