ಲೋಕಬಂಧು ನ್ಯೂಸ್ | ನವದೆಹಲಿ, ಸೆ.4
ಇಲ್ಲಿನ ವಸಂತ್ ಕುಂಜ್'ನಲ್ಲಿರುವ ಪೇಜಾವರದ ಶಾಖಾಮಠ ವೇದವ್ಯಾಸ ಗುರುಕುಲದ ಕೃಷ್ಣಧಾಮದಲ್ಲಿ ಚಾತುರ್ಮಾಸ್ಯ ನಿರತರಾಗಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶುಕ್ರವಾರ ಶ್ರೀಕೃಷ್ಣ ದೇವರಿಗೆ ವಿಶೇಷ ಅಭಿಷೇಕ ನೆರವೇರಿಸಿದರು.
ಬಳಿಕ ವಿಷ್ಣು ಸಹಸ್ರನಾಮಾವಳಿಯಿಂದ ತುಳಸಿ ಮತ್ತು ಪುಷ್ಪಾರ್ಚನೆ ನೆರವೇರಿಸಿದರು.