ಲೋಕಬಂಧು ನ್ಯೂಸ್ | ಉಡುಪಿ
ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಐದನೇ ಶಾಖೆ ಅಕ್ಟೋಬರ್ 25ರಂದು ಉಡುಪಿಯ ತಾಲೂಕು ಕಚೇರಿ ಬಳಿಯ ಸನಿಲ್ ಪ್ಲಾಜಾ ಕಟ್ಟಡದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿ ಅಧ್ಯಕ್ಷ ಎಚ್. ವಸಂತ್ ಬರ್ನಾಡ್ ತಿಳಿಸಿದ್ದಾರೆ.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಶಾಖೆಯನ್ನು ಉದ್ಘಾಟಿಸಲಿದ್ದು, ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಕೆ. ಅಭಯಚಂದ್ರ ಅವರು ದೀಪ ಪ್ರಜ್ವಲನೆ ನೆರವೇರಿಸಲಿದ್ದು, ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜಾ ಅವರು ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಅವರು ಕಂಪ್ಯೂಟರ್ ವ್ಯವಸ್ಥೆ ಹಾಗೂ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಐಕಳಬಾವ ಡಾ ದೇವಿಪ್ರಸಾದ್ ಶೆಟ್ಟಿ ಬೆಳಪು ಅವರು ಸ್ವಸಹಾಯ ಗುಂಪಿನ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡುವರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ. ಆರ್., ಉಡುಪಿ ಜಿಲ್ಲಾ ಕೇಂದ್ರ ಸಹಕಾರಿ ಯೂನಿಯನ್ ಮತ್ತು ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಪಡುಕುತ್ಯಾರು ಶ್ರೀ ಸರಸ್ವತಿ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಬಿ. ಸೂರಜ್ ಕುಮಾರ್, ಉಡುಪಿ ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ ನಿರ್ದೇಶಕ ಡಾ. ಸುಶೀಲ್ ಜತ್ತನ್ನ, ಉಡುಪಿ ಹೈಟೆಕ್ ಮೆಡಿಕೇರ್ ಹಾಸ್ಪಿಟಲ್ ಆಡಳಿತ ನಿರ್ದೇಶಕ ಡಾ. ಟಿ.ಎಸ್.ರಾವ್, ಉಡುಪಿ ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘ ಅಧ್ಯಕ್ಷರ ಶ್ರೀಧರ್ ದೇವಾಡಿಗ, ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತ ಅಧ್ಯಕ್ಷ ರಮೇಶ್ ಕಾಂಚನ್, ಉಡುಪಿ ಹೋಮಿಯೋಪಥಿಕ್ ಫಿಶಿಷಿಯನ್ ಡಾ. ಬೆರಿಲ್ ಎ. ಬೆರ್ನಾರ್ಡ್, ಕಟ್ಟಡ ಮಾಲೀಕ ಶಂಭು ಎ.ಸನಿಲ್ ಭಾಗವಹಿಸುವರು. ಎಂದು ಬರ್ನಾರ್ಡ್ ತಿಳಿಸಿದ್ದಾರೆ.
ಸಹಕಾರಿ ರಂಗದ ದಿಗ್ಗಜರಾದ ದಿ. ಎಚ್. ನಾರಾಯಣ ಸನಿಲ್ ಮತ್ತು ಪಂಜದ ಗುತ್ತು ದಿ. ಶಾಂತಾರಾಮ ಶೆಟ್ಟಿ ಪ್ರೇರಣೆಯಿಂದ ಕಳೆದ ಐದು ವರ್ಷದ ಹಿಂದೆ 2021ರಲ್ಲಿ ಪ್ರಾರಂಭಗೊಂಡ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ, ಪ್ರಸ್ತುತ 45 ಕೋಟಿ ರೂ. ಠೇವಣಿ ಹೊಂದಿದ್ದು, 3,843 ಸದಸ್ಯರನ್ನು ಒಳಗೊಂಡಿದೆ. ವಾರ್ಷಿಕ 484.78 ಕೋಟಿ ರೂ. ವಹಿವಾಟು ನಡೆಸುತ್ತಿದ್ದು, 54 ಲಕ್ಷ ರೂ. ವಾರ್ಷಿಕ ಲಾಭ ಗಳಿಸಿದೆ. 4 ಶಾಖೆಗಳ ಮೂಲಕ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಇದೀಗ ಉಡುಪಿಯಲ್ಲಿ ಐದನೇ ಶಾಖೆಯನ್ನು ಆರಂಭಿಸುತ್ತಿದೆ. 2025-26ನೇ ಸಾಲಿನಲ್ಲಿ ಶೇ.97ರಷ್ಟು ಸಾಲ ವಸೂಲಾತಿ ಸಾಧಿಸಿರುವ ಸೊಸೈಟಿಯ ಲೆಕ್ಕಪರಿಶೋಧನಾ ವರದಿ 'ಎ' ಶ್ರೇಣಿಯಲ್ಲಿದೆ.
ಚಿನ್ನಾಭರಣಗಳ ಪರಿಶುದ್ಧತೆ ಪರೀಕ್ಷಿಸಲು ಪ್ರಧಾನ ಕಚೇರಿಯಲ್ಲಿ ಗೋಲ್ಡ್ ಪ್ಯೂರಿಟಿ ಟೆಸ್ಟಿಂಗ್ ಯಂತ್ರವನ್ನೂ ಅಳವಡಿಸಲಾಗಿದೆ. ನಾಲ್ಕು ಶಾಖೆಗಳಲ್ಲಿ ಇ-ಮುದ್ರಾಂಕ ವ್ಯವಸ್ಥೆ, ಡಿಜಿಟಲ್ ಬ್ಯಾಂಕಿಂಗ್ ಹಾಗೂ ಹವಾನಿಯಂತ್ರಿತ ಬ್ಯಾಂಕಿಂಗ್ ವಿಭಾಗದ ಸೌಲಭ್ಯಗಳಿವೆ. ಸಂಸ್ಥೆಯಲ್ಲಿ 27 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, 15 ನಿರ್ದೇಶಕರ ತಂಡವಿದೆ.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ 2023-24, 2024-25 ಮತ್ತು 2025-26ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಿಂದ 'ವಿಶಿಷ್ಟ ಸಾಧನೆ ಪ್ರಶಸ್ತಿ' ಲಭಿಸಿದೆ. 2025ರ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಂದರ್ಭದಲ್ಲಿಯೂ ಸಂಸ್ಥೆಗೆ 'ಉತ್ತಮ ಪತ್ತಿನ ಸಹಕಾರಿ ಸಂಘ ಪ್ರಶಸ್ತಿ' ದೊರೆತಿದೆ ಎಂದವರು ತಿಳಿಸಿದ್ದಾರೆ.
ಸೊಸೈಟಿ ಉಪಾಧ್ಯಕ್ಷ ವಿಜಯಕುಮಾರ್ ಸನಿಲ್, ನಿರ್ದೇಶಕರಾದ ಉಮಾನಾಥ್ ಜೆ. ಶೆಟ್ಟಿಗಾರ್, ಧನಂಜಯ ಮಟ್ಟು ಮತ್ತು ಗಣೇಶ್ ಪ್ರಸಾದ್ ದೇವಾಡಿಗ, ಅನಿಲ್ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ ಹಾಗೂ ಉಡುಪಿ ಶಾಖಾ ಪ್ರಬಂಧಕಿ ನಿಶಾ ಸಹೈಲ್ ಡೇನಿಯಲ್ ಉಪಸ್ಥಿತರಿದ್ದರು.
.jpg)
.jpg)