ಲೋಕಬಂಧು ನ್ಯೂಸ್ ಉಡುಪಿ
ಸಾಮಾಜಿಕ ಕಾರ್ಯಕರ್ತ ಹಾಗೂ ಜಮಿಯತುಲ್ ಫಲಾಹ್ ಉಡುಪಿ ಘಟಕದ ಅಧ್ಯಕ್ಷರಾಗಿದ್ದ ಅಬ್ದುಲ್ ರಶೀದ್ ಮಲ್ಪೆಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಗುರುವಾರ ನಿಧನರಾದರು.ಅವರು ಸಾಮುದಾಯಿಕ, ಸಾಮಾಜಿಕ ಹಾಗೂ ಕೋಮು ಸೌಹಾರ್ದತೆಯ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು.
ಅಬ್ದುಲ್ ರಶೀದ್ ಅವರು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದರು ಜಮಿಯತುಲ್ ಫಲಾಹ್ ಉಡುಪಿ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಸ್ಥಾಪಕ ಸದಸ್ಯ ಹಾಗೂ ಮಾಜಿ ಹಿರಿಯ ಉಪಾಧ್ಯಕ್ಷರಾಗಿ,ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ವೇದಿಕೆ ಅಧ್ಯಕ್ಷರಾಗಿ, ಸಹಬಾಳ್ವೆಯ ಆರಂಭಿಕ ಸದಸ್ಯರಲ್ಲಿ ಒಬ್ಬರಾಗಿದ್ದರು.
ಕೋಮು ಸೌಹಾರ್ದ ವೇದಿಕೆಯ ಸಕ್ರಿಯ ಕಾರ್ಯಕರ್ತರಾಗಿ, ಸಯ್ಯದಿನ ಅಬೂಬಕ್ಕರ್ ಸಿದ್ದಿಕ್ ಜಾಮೀಯಾ ಮಸೀದಿ ಅಧ್ಯಕ್ ಎಸ್ಐಓಮಲ್ಪೆ ಶಾಖೆಯ ಮಾಜಿ ಅಧ್ಯಕ್ಷರಾಗಿದ್ದರು. ಹಲವು ಸಾಮಾಜಿಕ ಹಾಗೂ ಧಾರ್ಮಿಕ ಸಂಸ್ಥೆಗಳ ಬೆಳವಣಿಗೆಗೆ ಶ್ರಮಿಸಿದ್ದರು.
ಅಬ್ದುಲ್ ರಶೀದ್ ನಿಧನಕ್ಕೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ ಮುಹಮ್ಮದ್ ಮೌಲ, ಸಹಬಾಳ್ವೆ ಸಂಚಾಲಕ ಪ್ರೊ.ಫಣಿರಾಜ್ (ಸಂಚಾಲಕರು, ಸಹಬಾಳ್ವೆ),ಪ್ರೊ. ಅಬ್ದುಲ್ ಅಝೀಜ್ (ಜಿಲ್ಲಾಧ್ಯಕ್ಷರು, ಜಮಾಅತೆ ಇಸ್ಲಾಮಿ ಹಿಂದ್),ಹುಸೇನ್ ಕೋಡಿಬೆಂಗ್ರೆ, ಮುಹಮ್ಮದ್ ಇಸ್ಮಾಯಿಲ್ (ಅಧ್ಯಕ್ಷರು, ಸಾಲಿಹಾತ್ ಸಮೂಹ ಸಂಸ್ಥೆ),ಇದ್ರಿಸ್ ಹೂಡೆ (ಜಿಲ್ಲಾಧ್ಯಕ್ಷರು, ವೆಲ್ಫೇರ್ ಪಾರ್ಟಿ) ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.