ಲೋಕಬಂಧು ನ್ಯೂಸ್ ಉಡುಪಿ
ಪರ್ಯಾಯ ಶೀರೂರು ಮಠ ವತಿಯಿಂದ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಳದಲ್ಲಿ ಮಹಾನವಮಿಯಂದು ಸೋಮವಾರ ಶಮೀಪೂಜೆ ನೆರವೇರಿಸಲಾಯಿತು.ಸಂಪ್ರದಾಯಂತೆ ಕೃಷ್ಣ ಮಠದಿಂದ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತೆರಳಿ, ಅಲ್ಲಿರುವ ಶಮೀವೃಕ್ಷಕ್ಕೆ ಪೂಜೆ ಸಲ್ಲಿಸಿ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಿ ದರ್ಶನ ಪಡೆಯಲಾಯಿತು.ಬಳಿಕ ಶ್ರೀಕೃಷ್ಣ ಮಠಕ್ಕೆ ಮರಳಿ ಅಲ್ಲಿನ ಪ್ರಸಾದವನ್ನು ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಗೆ ನೀಡಲಾಯಿತು.
ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ, ಪಾರುಪತ್ಯೆಗಾರ ಶ್ರೀಶ ಭಟ್ ಕಡೆಕಾರು, ಅಧಿಕಾರಿಗಳಾದ ವೆಂಕಟರಮಣ ಮುಚ್ಚಿಂತಾಯ, ನಾರಾಯಣ ಸರಳಾಯ ಮೊದಲಾದವರಿದ್ದರು.