ಲೋಕಬಂಧು ನ್ಯೂಸ್ | ಬ್ರಹ್ಮಾವರ
ಉಡುಪಿಯ ಆದರ್ಶ ಆಸ್ಪತ್ರೆಯ ಡಾ.ಜಿ.ಎಸ್ ಚಂದ್ರಶೇಖರ್ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿ, ಆಮೇಲೆ ಬದಲಾವಣೆ ಮಾಡಿರುವುದು ಸರಿಯಾದ ಕ್ರಮವಲ್ಲ. ಅದು ಕಾಯಕ ಯೋಗಿಗೆ ಮಾಡಿದ ಅವಮಾನ ಎಂದು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಖೇದ ವ್ಯಕ್ತಪಡಿಸಿದ್ದಾರೆ.
ಡಾ.ಜಿ.ಎಸ್. ಚಂದ್ರಶೇಖರ್ ಅವರ ಸೇವೆ ಅನ್ಯನ್ಯ ಮತ್ತು ಅನುಪಮವಾದುದು. ಅವರದ್ದು ಬೆಲೆ ಕಟ್ಟಲಾಗದ ಕಾಯಕ.
ಅವರಿಗಾಗಿರುವ ಅವಮಾನ ಇಡೀ ನಾಡಿಗೇ ಆಗಿರುವ ಅವಮಾನ ಎಂದು ವ್ಯಾಖ್ಯಾನಿಸಿರುವ ಅಡಿಗ ಅವರು, ಡಾ.ಚಂದ್ರಶೇಖರ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಆಗಿರುವ ತಪ್ಪನ್ನು ತಕ್ಷಣ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
