ಲೋಕಬಂಧು ನ್ಯೂಸ್ ಉಡುಪಿ
ನಿಟ್ಟೂರಿನ ಶ್ರೀದೇವಿ ಗ್ಲಾಸ್ ಫ್ಯಾಕ್ಟರಿಯಲ್ಲಿ ಗಾಜಿನ ಬ್ಲಾಕ್ಗಳನ್ನು ಅನ್ ಲೋಡ್ ಮಾಡುತ್ತಿದ್ದ ವೇಳೆ ಸಂಭವಿಸಿದ ಅವಘಡದಲ್ಲಿ ಸಾಮಾಜಿಕ ಕಾರ್ಯಕರ್ತ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತ, ಉಡುಪಿ ಶ್ರೀಕೃಷ್ಣ ಮಠ ಪರಿಸರದ ನಿವಾಸಿ ಸುನಿಲ್ ಬೈಲಕೆರೆ (45) ಸಾವನ್ನಪ್ಪಿದ್ದಾರೆ.ಗಾಜಿನ ಬ್ಲಾಕ್ಗಳು ಸುನಿಲ್ ಅವರ ಮೇಲೆ ಎರಗಿದ ಪರಿಣಾಮ ಎದೆ ಭಾಗ ಜಜ್ಜಿ ಹೋಗಿದ್ದು, ತಕ್ಷಣ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿತಾದರೂ, ಆಸ್ಪತ್ರೆಗೆ ತರುವ ಮುಂಚೆಯೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.
ಸುನಿಲ್ ಅವರು ಶೀರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರಿಗೆ ಆಪ್ತರಾಗಿದ್ದು, ಶ್ರೀಗಳ ಕಾರು ಚಾಲಕರಾಗಿಯೂ ಕಾರ್ಯನಿರ್ವಹಿಸಿದ್ದರು.
ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.