ಡಾ.ಗೋಪಾಲಾಚಾರ್ ಸಹಿತ ವಿದ್ವಾಂಸರಿಗೆ ಕಾಣಿಯೂರು ಮಠದಿಂದ ಸನ್ಮಾನ

ಲೋಕಬಂಧು ನ್ಯೂಸ್ | ಉಡುಪಿ
ಆಚಾರ್ಯ ಮಧ್ವರ ಜನ್ಮಭೂಮಿ ಪಾಜಕ ಕ್ಷೇತ್ರದಲ್ಲಿ  ಮಧ್ವಜಯಂತಿ ಪ್ರಯುಕ್ತ ಅ.21ರಿಂದ 25ರ ವರೆಗೆ ಸರ್ವಮೂಲ ಗ್ರಂಥಗಳ ಸಮಗ್ರ ಪಾರಾಯಣ  ನಡೆದಿದ್ದು, ಪಾರಾಯಣದ ಮಂಗಳ ಮತ್ತು 108 ಜನರಿಂದ ಸುಮಧ್ವವಿಜಯ ಪಾರಾಯಣ ಅಂಗವಾಗಿ ನಡೆದ ಸಭೆಯಲ್ಲಿ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಡಾ‌.ಬಿ.ಗೋಪಾಲಾಚಾರ್ ಉಡುಪಿ ಅವರಿಗೆ ಶ್ರೀಸುಖತೀರ್ಥಾನುಗ್ರಹ ಪ್ರಶಸ್ತಿಯೊಂದಿಗೆ ಸನ್ಮಾನಿಸಿದರು.
ಅದೇ ಸಂದರ್ಭದಲ್ಲಿ ಮುಂಬೈ ಸತ್ಯಧ್ಯಾನ ವಿದ್ಯಾಪೀಠದ ವಿದ್ವಾಂಸ ರಾಮಕೃಷ್ಣಾಚಾರ್, ಉಡುಪಿ ಸಂಸ್ಕೃತ ಮಹಾವಿದ್ಯಾಲಯದ ಉಪನ್ಯಾಸಕರಾದ ವಿದ್ವಾನ್ ಸತ್ಯನಾರಾಯಣ ರಾವ್ ಮತ್ತು ವಿದ್ವಾನ್ ಆನಂದತೀರ್ಥಾಚಾರ್ ಮಠದ ಅವರಿಗೂ ಶ್ರೀಸುಖತೀರ್ಥಾನುಗ್ರಹ ಪ್ರಶಸ್ತಿಯೊಂದಿಗೆ ಗೌರವಿಸಿದರು.
ವಿದ್ವಾಂಸ ಪ್ರೊ. ವ್ಯಾಸನಕೆರೆ ಪ್ರಭಂಜನಾಚಾರ್ಯ ಮತ್ತು ಅನೇಕ ವಿದ್ವಾಂಸರು ಹಾಗೂ ಭಕ್ತರು ಉಪಸ್ಥಿತರಿದ್ದರು.