ಕೊಡವೂರು: ಬ್ರಹ್ಮಕಲಶೋತ್ಸವ ಪ್ರಚಾರ ಭಿತ್ತಿಪತ್ರ ಬಿಡುಗಡೆ

ಲೋಕಬಂಧು ನ್ಯೂಸ್ ‌ಮಲ್ಪೆ
ಮಹತೋಭಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಜನವರಿ 20ರಂದು ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಪ್ರಚಾರ ಭಿತ್ತಿಪತ್ರವನ್ನು ಪುತ್ತೂರು ಹಯವದನ ತಂತ್ರಿ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ‌ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಪವಿತ್ರಪಾಣಿ ಜನಾರ್ದನ ಕೊಡವೂರು, ಸಮಿತಿ ಸದಸ್ಯರಾದ ಸೀತಾರಾಮ ಆಚಾರ್ಯ, ರಾಜ ಎ. ಸೇರಿಗಾರ್, ವಾದಿರಾಜ ಸಾಲ್ಯಾನ್, ಪ್ರಮುಖರಾದ ಗಣೇಶ್, ವಿಜಯ ಎಂ. ಬಂಗೇರ, ಉಮೇಶ್ ರಾವ್, ಪೂರ್ಣಿಮಾ ಜನಾರ್ದನ್ ಮೊದಲಾದವರಿದ್ದರು.