ಲೋಕಬಂಧು ನ್ಯೂಸ್ | ಮೈಸೂರು
ತನ್ನ ವಿರುದ್ಧ ನಡೆಸಲಾದ ಸ್ಟಿಂಗ್ ಕಾರ್ಯಾಚರಣೆಯಲ್ಲಿ ಮಂಗಳೂರಿನ ಕೃಪಾ ಆಳ್ವ ಹಾಗೂ 'ಪವರ್ ಟಿವಿ'ಯ ರಾಕೇಶ್ ಶೆಟ್ಟಿ ಕೈವಾಡ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆರೋಪಿಸಿದ್ದಾರೆ.
ಶುಕ್ರವಾರ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಸ್ಟಿಂಗ್ ಬಗ್ಗೆ ತನಿಖೆ ನಡೆಯುತ್ತಿದೆ. ಸತ್ಯ ಹೊರಗೆ ಬರಲಿ ಎಂದೇ ದೂರು ನೀಡಿದ್ದೆನೆ. ಸ್ಟಿಂಗ್ ಆಪರೇಷನ್'ನಲ್ಲಿ ಯಾವುದೇ ಸತ್ಯ ಇಲ್ಲ. ಎಲ್ಲವೂ ಸುಳ್ಳು. ಸತ್ಯ ಹೊರಗೆ ಬರಲಿ ಎಂದರು.
ಎಚ್.ಡಿ. ಕುಮಾರಸ್ವಾಮಿ ನನ್ನ ಪರ ಅಲ್ಲ, ಯಾರೂ ಯಾರ ಪರ ಇಲ್ಲ. ಸುಳ್ಳಾಗಿರುವುದರಿಂದ ಯಾರ ಅಗತ್ಯ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೈಸೂರು ತಮ್ಮ ಸ್ವಂತ ಮನೆಯಾಗಿದೆ. ತನ್ನ ಮಗ ಯತೀಂದ್ರ 11 ದಿನಗಳ ನವರಾತ್ರಿ ಅವಧಿಯಲ್ಲಿ ಇಲ್ಲೇ ಇದ್ದ ಕಾರಣ ತಾನೂ ಮೈಸೂರಿನಲ್ಲಿ ಉಳಿದುಕೊಂಡಿದ್ದಾಗಿ ಸ್ಪಷ್ಟಪಡಿಸಿದರು.
