ಲೋಕಬಂಧು ನ್ಯೂಸ್ ಉಡುಪಿ
ನೂತನವಾಗಿ ನಿರ್ಮಾಣಗೊಂಡಿರುವ ಉಡುಪಿ ಜಿಲ್ಲಾಸ್ಪತ್ರೆ ಕಟ್ಡಡದಲ್ಲಿ ಹಳೆ ಆಸ್ಪತ್ರೆಯ ಪರಿಕರಗಳನ್ನು ಅಳವಡಿಸಿರುವ ವಿರುದ್ಧ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಲಾಯಿತು.ವೇದಿಕೆ ಜಿಲ್ಲಾಧ್ಯಕ್ಷ ಫ್ರಾಂಕಿ ಡಿ'ಸೋಜ ಕೊಳಲಗಿರಿ ಮಾತನಾಡಿ, ಸುಮಾರು 110 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಐದು ಅಂತಸ್ತಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸುಮಾರು 350ರಿಂದ 400 ಜನ ಸಿಬ್ಬಂದಿ ಮತ್ತು ವೈದ್ಯರ ಅಗತ್ಯ ಇದೆ. ಆಸ್ಪತ್ರೆಯಲ್ಲಿ ನೂತನ ಪರಿಕರಗಳನ್ನು ಅಳವಡಿಸುವ ಬದಲಿಗೆ ಹಳೆಯ ಆಸ್ಪತ್ರೆಯ ವೈದ್ಯಕೀಯ ಪರಿಕರಗಳು, ಆಪರೇಷನ್ ಥಿಯೇಟರ್ಗಳಿಗೆ ಬೇಕಾದ ಹಳೆಯ ಮಿಷನರಿಗಳು, ಹಳೆಯ ಬೆಡ್'ಗಳು ಮತ್ತು ಸರ್ಜಿಕಲ್ ಪರಿಕರಗಳನ್ನು ಅಳವಡಿಸಿರುವುದು ಮಾತ್ರವಲ್ಲದೇ ಅಗತ್ಯ ಸಿಬ್ಬಂದಿ ನೇಮಕಾತಿ ಆಗದಿರುವುದು ಖಂಡನೀಯ ಎಂದರು.
ಸರ್ಕಾರ ಈಗಾಗಲೇ 9 ಕೋ. ರೂ. ಅನುದಾನ ಬಿಡುಗಡೆ ಮಾಡಿದ್ದು, ಅದನ್ನು ಸದುಪಯೋಗಪಡಿಸಿಕೊಂಡು ನೂತನ ವೈದ್ಯಕೀಯ ಪರಿಕರಗಳನ್ನು ಅಳವಡಿಸಿ, ಆ ಬಳಿಕವೇ ಆಸ್ಪತ್ರೆ ಕಾರ್ಯಾರಂಭ ಮಾಡಬೇಕು ಎಂದು ಆಗ್ರಹಿಸಿದರು.
ಆಸ್ಪತ್ರೆಯ ಹಿರಿಯ ವೈದ್ಯ ಡಾ.ವಾಸುದೇವ ಎಸ್. ಮೂಲಕ ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು.
ಸಂಘಟನೆಯ ಪ್ರಮುಖರಾದ ಜಯ ಪೂಜಾರಿ ಲಕ್ಷ್ಮೀನಗರ, ನಾಗಲಕ್ಷ್ಮಿ ಸುಬ್ರಹ್ಮಣ್ಯ ನಗರ, ಶಂಕರ್ ಉಡುಪಿ, ನಿತೀನ್ ಕುಮಾರ್ ಶೆಟ್ಟಿ ಕಾಪು, ಅನುಸೂಯ ಶೆಟ್ಟಿ ಕಾಪು, ಪವಿತ್ರ, ನಿರ್ಮಲ ಮೆಂಡನ್, ವನಿತಾ, ಗಾಯತ್ರಿ, ಪ್ರೀತಮ್ ಡಿ'ಕೋಸ್ತಾ, ಗುಣಕರ ಹಾಲಕ್ಕಿ, ಉದಯ್, ರವಿ, ರಮೇಶ, ಸಂತೋಷ್ ಭಂಡಾರಿ, ಗುಲಾಬಿ ಕೋಟ್ಯಾನ್, ಹರಿಣಾಕ್ಷಿ, ರಾಜಶ್ರೀ, ಶಮಲ, ಉಷಾ ಸೋಮಶೇಖರ್ ಮೊದಲಾದವರಿದ್ದರು.