ಶೃಂಗೇರಿ ಶಾರದಾಂಬಾ ರಥೋತ್ಸವ; ಜಗದ್ಗುರುಗಳ ಅಡ್ಡಪಲ್ಲಕಿ ಉತ್ಸವ

ಲೋಕಬಂಧು ನ್ಯೂಸ್ ಶೃಂಗೇರಿ
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಮಹೋತ್ಸವ ಸಂದರ್ಭದಲ್ಲಿ ಏಕಾದಶಿಯಂದು ಗುರುವಾರ ಜಗಜ್ಜನನಿ‌ ಶ್ರೀ ಶಾರದಾಂಬೆಯ ಮನ್ಮಹಾರಥೋತ್ಸವ ಹಾಗೂ ಜಗದ್ಗುರು ಮಹಾಸ್ವಾಮಿಗಳ ಅಡ್ಡಪಲ್ಲಕಿ ಉತ್ಸವ ವೈಭವದಿಂದ ‌ನಡೆಯಿತು.ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ಪಾರಂಪರಿಕ ರಾಜಠೀವಿಯ ದಿರಿಸು ತೊಟ್ಟು ಅಡ್ಡಪಲ್ಲಕಿಯಲ್ಲಿ ವಿರಾಜಮಾನರಾಗಿದ್ದರು.ಆಕರ್ಷಕ ಟ್ಯಾಬ್ಲೊಗಳು, ವಾದ್ಯಘೋಷ, ವೇದಘೋಷಗಳ ನಡುವೆ ಸಹಸ್ರಾರು‌ ಭಕ್ತರ ಕೂಡುವಿಕೆಯಲ್ಲಿ ರಥ ಸಾಗಿಬರುತ್ತಲೇ ರಥಾರೂಢೆ ಶ್ರೀ ಶಾರದೆ ಸಾಗಿಬರುತ್ತಲೇ ರಥದ ಮುಂದಿನಿಂದ ಸಾಗುತ್ತಿದ್ದ ಪಲ್ಲಕಿಯಲ್ಲಿ ವಿರಾಜಮಾನರಾಗಿದ್ದ ಜಗದ್ಗುರು ಮಹಾಸ್ವಾಮಿಗಳು ಧ್ಯಾನಸ್ಥರಾಗಿದ್ದರು.ರಥಬೀದಿಯಲ್ಲಿ ಒಂದು ಸುತ್ತು ರಥೋತ್ಸವ ನಡೆಯಿತು. ಈ ಅಪೂರ್ವ ದೃಶ್ಯವನ್ನು ಸಹಸ್ರಾರು ಮಂದಿ ಕಣ್ತುಂಬಿಕೊಂಡರು.