ಲೋಕಬಂಧು ನ್ಯೂಸ್ | ಮಣಿಪಾಲ
ಇಲ್ಲಿನ ಮುನಿಯಾಲ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕಾಯಚಿಕಿತ್ಸಾ ವಿಭಾಗದ ವತಿಯಿಂದ ಸೊಂಟನೋವು, ಬೆನ್ನಿನ ಬಿಗಿತದಿಂದ ಬಳಲುತ್ತಿರುವವರಿಗಾಗಿ ನವೆಂಬರ್ 2ರಿಂದ 7ರ ವರೆಗೆ ಉಚಿತ ತಪಾಸಣೆ ಮತ್ತು ಸಲಹಾ ಶಿಬಿರ ಆಯೋಜಿಸಲಾಗಿದೆ.
ಲಂಬಾರ್ ಸ್ಪಾಂಡಿಲೋಸಿಸ್ ಸಮಸ್ಯೆಯಿಂದ ಬಳಲುವವರಿಗೆ ವಿಶೇಷ ಆಯುರ್ವೇದ ತಪಾಸಣೆ ಹಾಗೂ ಉಚಿತ ಚಿಕಿತ್ಸಾ ಸೌಲಭ್ಯ ಒದಗಿಸಲಾಗುವುದು. ಬೆನ್ನುನೋವು ಮತ್ತು ಸೊಂಟನೋವಿನ ಸಮಸ್ಯೆಗಳಿಗೆ ಸೂಕ್ತ ಸಲಹೆ, ಚಿಕಿತ್ಸೆ ಶಿಬಿರ ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 4.30ರ ವರೆಗೆ ಆಸ್ಪತ್ರೆಯಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ 81234 03233ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
