ಲೋಕಬಂಧು ನ್ಯೂಸ್ ಕಾರ್ಕಳ
ಉಡುಪಿ ಜಿಲ್ಲಾ ರಾಜ್ಯೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸುವ ಸಂಪ್ರದಾಯವನ್ನು ಜಿಲ್ಲಾಡಳಿತ ಈ ಬಾರಿ ಕೈಬಿಟ್ಟಿದ್ದು, ಕನ್ನಡ ನಾಡು- ನುಡಿಯ ಉತ್ಸವವನ್ನೂ ಸಂಭ್ರಮದಿಂದ ಆಚರಣೆ ಮಾಡದಿರುವಷ್ಟು 'ಸಾಂಸ್ಕ್ರತಿಕ ದಾರಿದ್ರ್ಯ'; ಈ ಸರ್ಕಾರವನ್ನು ಆವರಿಸಿದೆಯೋ ಅಥವಾ ದಿವಾಳಿತನವೇ ಎಂದು ಮಾಜಿ ಸಚಿವ ಹಾಗೂ ಶಾಸಕ ವಿ.ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.ಪಕ್ಕದ ಜಿಲ್ಲೆಯಲ್ಲಿ ನಡೆಯುವ ಉತ್ಸವವನ್ನು ಉಡುಪಿ ಜಿಲ್ಲೆಯಲ್ಲಿ ನಡೆಸುವುದು ಜಿಲ್ಲಾಡಳಿತಕ್ಕೆ ಅಸಾಧ್ಯ ಎಂದರೆ ಅರ್ಥವೇನು ಎಂದು ಪ್ರಶ್ನಿಸಿದ್ದಾರೆ.
ಇದು ಜಿಲ್ಲಾಧಿಕಾರಿಯ ಸೂಚನೆಯೋ ಅಥವಾ ನೂತನ ಜಿಲ್ಲಾ ಉಸ್ತುವಾರಿ ಮಂತ್ರಿಯ ಸೂಚನೆಯೋ ಅಥವಾ ರಾಜ್ಯ ಸರ್ಕಾರವೇ ಈ ನಿರ್ದೇಶನ ನೀಡಿದೆಯೋ ಎಂದು ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.