ಲೋಕಬಂಧು ನ್ಯೂಸ್ ಮಣಿಪಾಲ
ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಪರೀಕ ಸೌಖ್ಯವನ ಆಶ್ರಯದಲ್ಲಿ ಕಾರುಣ್ಯ ಐ ಕೇರ್ ಸೆಂಟರ್ ಉಡುಪಿ ಸಹಯೋಗದೊಂದಿಗೆ ನ.1ರಂದು ಭಾನುವಾರ ಸೌಖ್ಯವನದ ಕ್ಷೇಮ ಹಾಲ್'ನಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.ಸೌಖ್ಯವನದ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲ ಪೂಜಾರಿ ಮತ್ತು ಕಾರುಣ್ಯ ಐ ಕೇರ್ ಸೆಂಟರ್ನ ನೇತ್ರ ತಜ್ಞ ಡಾ.ಅಭಿಜಿತ್ ಉದ್ಘಾಟಿಸಿದರು.
ಕಣ್ಣು ತಪಾಸಣೆಯ ಅಗತ್ಯತೆ ಮತ್ತು ಪ್ರಸ್ತುತ ಜೀವನದಲ್ಲಿ ಕಣ್ಣಿನ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿದ ಡಾ.ಅಭಿಜಿತ್ ಅವರು, ಉಡುಪಿಯಲ್ಲಿರುವ ಕಾರುಣ್ಯ ಐ ಕೇರ್ ಸೆಂಟರ್ನ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ವಿನಂತಿಸಿದರು.
ಡಾ.ಗೋಪಾಲ್ ಪೂಜಾರಿ ಮಾತನಾಡಿ, ಸಣ್ಣ ಮಕ್ಕಳಿಂದ ಹಿಡಿದು ಹಿರಿಯರು ಕೂಡಾ ಕಾಲ ಕಾಲಕ್ಕೆ ಕಣ್ಣಿನ ತಪಾಸಣೆ ಕೈಗೊಳ್ಳುವಂತೆ ತಿಳಿಸಿದರು.
ಡಾ.ಶೋಭಿತ್ ಶೆಟ್ಟಿ ಶುಭ ಹಾರೈಸಿದರು.
ಸೌಖ್ಯವನದ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸೌಖ್ಯವನದ ವೈದ್ಯೆ ಡಾ.ಪೂಜಾ ವಂದಿಸಿದರು.
ಶಿಬಿರದಲ್ಲಿ 152 ಮಂದಿ ತಪಾಸಣೆ ಕೈಗೊಂಡರು.
ಈ ಸಂದರ್ಭದಲ್ಲಿ ಡಾ.ಅಭಿಜಿತ್ ಅವರನ್ನು ಗೌರವಿಸಲಾಯಿತು.