ನ.15ರಂದು ಗೋವಿಂದ ಭಟ್ ಪ್ರಶಸ್ತಿ ಪ್ರದಾನ

ಲೋಕಬಂಧು ನ್ಯೂಸ್ ಉಡುಪಿ
ಹಿರಿಯ ಯಕ್ಷಗಾನ ಕಲಾವಿದರಾಗಿದ್ದ ಯಕ್ಷಗಾನದ ದಶಾವತಾರಿ ಖ್ಯಾತಿಯ‌ ಕೀರ್ತಿಶೇಷ  ಸೂರಿಕುಮೇರಿ ಗೋವಿಂದ ಭಟ್ಟರ ಹೆಸರಿನಲ್ಲಿ ಯಕ್ಷಗಾನ ಕಲಾರಂಗದಲ್ಲಿ ಯಕ್ಷಗಾನದ ಮಹಾಪೋಷಕ ಡಾ.ಟಿ.ಶ್ಯಾಮ್ ಭಟ್ ಪ್ರಶಸ್ತಿ ನಿಧಿ ಸ್ಥಾಪಿಸಿದ್ದು, ಮೊದಲ ಪ್ರಶಸ್ತಿಯನ್ನು ನ.15ರಂದು ದಿವಾಣ ಶಿವಶಂಕರ ಭಟ್ ಅವರಿಗೆ ನೀಡಲಾಗುವುದು ಎಂದು ಕಲಾರಂಗ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆ ತಿಳಿಸಿದೆ.