ಕಟೀಲು ನುಡಿಹಬ್ಬದಲ್ಲಿ ಗುರುವಂದನೆ

ಲೋಕಬಂಧು ನ್ಯೂಸ್ ‌ಮೂಲ್ಕಿ
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ನಿವೃತ್ತರಾದ ಗುರುಗಳನ್ನು ನುಡಿಹಬ್ಬದ ವೇದಿಕೆಯಲ್ಲಿ ಹಳೆವಿದ್ಯಾರ್ಥಿಗಳ ಸಮೂಹ 'ನಮ್ಮೆಲ್ಲರ ಶಾಲೆ ತಂಡ' ವತಿಯಿಂದ ಗುರುವಂದನೆಯ ಮೂಲಕ ಗೌರವಿಸಿತು.ಕೇಶವ ಹೊಳ್ಳ, ಡಾ. ನಾರಾಯಣ ಭಟ್ಟ, ವಾಸುದೇವ ಶೆಣೈ, ವೈ. ಮಾಲತಿ, ಸತೀಶ್ ಭಟ್ ಹಾಗೂ ಸುಂದರ ಪೂಜಾರಿ ಅವರನ್ನು ಸಂಮಾನಿಸಲಾಯಿತು.


ನಿವೃತ್ತ ಶಿಕ್ಷಕ ವಾಸುದೇವ ಶೆಣೈ ಮಾತನಾಡಿ ಗುರು- ಶಿಷ್ಯರ ಮಧ್ಯೆ ಪ್ರೀತಿ, ಆತ್ಮೀಯತೆ, ಅಭಿಮಾನದ ಸಂಬಂಧ ಇರಬೇಕು. ಇಂಥ ಗೌರವಗಳು ನಿವೃತ್ತರಾದ ಶಿಕ್ಷಕರಿಗೆ ಸಂತೃಪ್ತಿ ತರುತ್ತದೆ ಎಂದರು.


'ನಮ್ಮೆಲ್ಲರ ಶಾಲೆ ಬಳಗ'ದ ಸಿಎ ಚಂದ್ರಶೇಖರ ಶೆಟ್ಟಿ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಸೌಮ್ಯಾ ಸುಧಾಕರ ಶೆಟ್ಟಿ, ಡಾ. ವನಿತಾ ಶೆಟ್ಟಿ, ಸಿಎ ಸುನಿಲ್ ಭಂಡಾರಿ, ನಾಗೇಶ್ ಶೆಟ್ಟಿ, ವಿನುತಾ ಹರೀಶ್ ಹಾಗೂ ಸಮ್ಮೇಳನಾಧ್ಯಕ್ಷ ಡಾ.ಬಿ. ಜನಾರ್ದನ ಭಟ್ ಇದ್ದರು.