ಅಚ್ಚರಿ ಹುಟ್ಟಿಸುವ ಹಕ್ಕಿಗಳ ಪ್ರಪಂಚ

ಲೋಕಬಂಧು ನ್ಯೂಸ್ ಮೂಲ್ಕಿ
ಹಕ್ಕಿಗಳು‌ ಕಣ್ಣಿಗೆ ಕಾಣುತ್ತಿದ್ದರೂ ನಾವು ಅವುಗಳ ಬಗ್ಗೆ ಅಷ್ಟಾಗಿ ಗಮಹರಿಸುವುದಿಲ್ಲ. ಅವುಗಳ ಬಗ್ಗೆ ಕುತೂಹಲದಿಂದ ಗಮನಿಸಿದರೆ ಅನೇಕ ಸಂಗತಿಗಳು ನಮ್ಮನ್ನೇ
ಅಚ್ಚರಿಗೊಳಿಸುತ್ತವೆ ಎಂದು ಹಕ್ಕಿಗಳ ವೀಕ್ಷಣೆಯ ಮಾರ್ಗದರ್ಶಿ ದಾಂಡೇಲಿಯ ರಜನಿ ರಾವ್ ಹೇಳಿದರು.ಕಟೀಲು ನುಡಿಹಬ್ಬದಲ್ಲಿ 'ಹಕ್ಕಿ ಹಾರುತಿದೆ ನೋಡಿದಿರಾ' ಗೋಷ್ಟಿಯಲ್ಲಿ ಹಕ್ಕಿಗಳ
ಕುರಿತು ಮಾತನಾಡಿದರು.


ಕರಾವಳಿಯ ಈ ಭಾಗದಲ್ಲಿ 438 ಪ್ರಬೇಧದ ಹಕ್ಕಿಗಳಿದ್ದು ಪ್ರತಿವರ್ಷ ಈ ಭಾಗದಲ್ಲಿ 76 ಜಾತಿಯ ಹಕ್ಕಿಗಳು ಬರುತ್ತವೆ. ಸಸಿಹಿತ್ಲು ಪ್ರದೇಶದಲ್ಲಿ 154 ಜಾತಿಯ ಹಕ್ಕಿಗಳು ಇವೆ ಎಂದು ಒಂದು ಅಧ್ಯಯನ ಹೇಳುತ್ತದೆ. ಕಟೀಲಿನಲ್ಲಿ ಗಮನಿಸಿದಾಗ ಹದಿನೈದು ಪ್ರಬೇಧದ ಹಕ್ಕಿಗಳು ಕಂಡುಬಂದಿವೆ ಎಂದರು.


ಭಾರತದಲ್ಲಿ ದಟ್ಟ ಕಾಡು ಇದ್ದು ಹಾರ್ನ್‌ವಿಲ್ ಹಕ್ಕಿಗಳು ಯಥೇಚ್ಛವಾಗಿ ಕಾಣುತ್ತವೆ.


ಹಕ್ಕಿಗಳು ರೈತನ ಮಿತ್ರನೂ ಹೌದು. ಹೆಣ್ಣು ಹಕ್ಕಿ ಗಂಡು ಹಕ್ಕಿಯನ್ನು ಆಯ್ಕೆ ಮಾಡಲು
ತುಂಬಾ ಯೋಚನೆ ಮಾಡುತ್ತದೆ. ಗಂಡನ್ನು ಆಯ್ಕೆ ಮಾಡಿದ ಮೇಲೆ ಮತ್ತೆ ಇನ್ನೊಂದನ್ನು
ಗಮನಿಸುವುದಿಲ್ಲ. ಮಂಗಟ್ಟೆ ಹಕ್ಕಿ 40ರಿಂದ 80 ಕಿ.ಮೀ. ದೂರ ಹೋಗಿ ತನ್ನ
ಸಂಗಾತಿಗೆ ಹಣ್ಣನ್ನು ತರುವ ಗಂಡು ಹಕ್ಕಿ. ಅದು 140 ಹಣ್ಣನ್ನು ಗಂಟಲಿನಿಂದ ತೆಗೆದು ಕೊಟ್ಟ ದಾಖಲೆ ಇದೆ ಎಂದರು.


ಹಕ್ಕಿಗಳ ಜೀವನ ಕುತೂಹಲಕಾರಿ. ನಾವು ಕೂಡಾ ಹಕ್ಕಿಗಳ ರೀತಿ ನಿರಂತರ ಕೆಲಸ
ಮಾಡುತ್ತಲೇ ಇರಬೇಕು. ಬದುಕಬೇಕೆಂದರೆ ಸ್ವತಂತ್ರವಾಗಿ ಬೆಳೆಯಬೇಕು, ಶ್ರಮ ವಹಿಸಬೇಕು ಎನ್ನುವುದನ್ನು ಹಕ್ಕಿಗಳ ಬದುಕಿನಿಂದ ಕಲಿಯಬೇಕು ಎಂದು ರಜನಿ ರಾವ್ ಹೇಳಿದರು.


ಸಮ್ಮೇಳನಾಧ್ಯಕ್ಷ ಡಾ.ಬಿ.ಜನಾರ್ದನ ಭಟ್ ಇದ್ದರು.