ಲೋಕಬಂಧು ನ್ಯೂಸ್ ಉಡುಪಿ, ಏ.11
ನಗರದ ಮಿಷನ್ ಆಸ್ಪತ್ರೆ ವತಿಯಿಂದ ಕಟಪಾಡಿಯಲ್ಲಿ ಪ್ರಾರಂಭವಾದ ಲೊಂಬಾರ್ಡ್ ಮಿಷನ್ ಹೆಲ್ತ್ ಸೆಂಟರ್‌ನಲ್ಲಿ ಏ.12ರಂದು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ.ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಸಾಮಾನ್ಯ ಆರೋಗ್ಯ, ನೇತ್ರ, ಸ್ತ್ರೀರೋಗ, ಕಿವಿ ಮೂಗು ಗಂಟಲು, ಮಧುಮೇಹ, ಇ.ಸಿ.ಜಿ ತಪಾಸಣೆ ನಡೆಯಲಿದ್ದು ಸಾರ್ವಜನಿಕರು ಈ ಶಿಬಿರದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಆಸ್ಪತ್ರೆ ನಿರ್ದೇಶಕ ಡಾ.ಸುಶಿಲ್ ಜತ್ತನ್ನ ತಿಳಿಸಿದ್ದಾರೆ.