ಒಲಿಂಪಿಕ್ಸ್ ಮೂಲಕ ವಸುಧೈವ ಕುಟುಂಬಕಮ್' ಪರಿಚಯ

ಲೋಕಬಂಧು ನ್ಯೂಸ್ ಉಡುಪಿ, ಏ.29
ಗ್ರೀಸ್ ರಾಷ್ಟ್ರ 'ವಸುಧೈವ ಕುಟುಂಬಕಮ್' ಮಂತ್ರವನ್ನು ಒಲಿಂಪಿಕ್ಸ್ ಮೂಲಕ ಜಗತ್ತಿಗೆ ಸಾರಿದೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.ಇದೇ ಮೊದಲ ಬಾರಿಗೆ ಗ್ರೀಸ್‌ನಲ್ಲಿ ಭಾರತೀಯ ಧರ್ಮಗುರುಗಳು, ವಿದ್ವಾಂಸರು ಹಾಗೂ ಚಿಂತಕರು‌‌ ಇತ್ತೀಚೆಗೆ ಹಮ್ಮಿಕೊಂಡಿದ್ದ 'ದೇವಿ ಮಹಾತ್ಮ್ಯೆ- ಧಾರ್ಮಿಕ ಪುನರುಜ್ಜಿವನ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ವಿಶ್ವದ ಉಳಿವು ಗೀತೆಯ ಸಂದೇಶ ಹಾಗೂ ದೇವಿ ಮಹಾತ್ಮ್ಯೆಯನ್ನು ಅವಲಂಬಿಸಿದೆ. ಜಗತ್ತಿನಲ್ಲಿ ಸಹೋದರತ್ವ ಮತ್ತು ಏಕತೆಯ ಭಾವನೆಯನ್ನು ತರಲು ಗ್ರೀಸ್, ಒಲಿಂಪಿಕ್ಸ್ ಪ್ರಾರಂಭಿಸಿತು. ಆ ಮೂಲಕ ಗ್ರೀಸ್ ರಾಷ್ಟ್ರ ವಸುಧೈವ ಕುಟುಂಬಕಮ್ ಮಂತ್ರವನ್ನು ಜಗತ್ತಿಗೆ ಪರಿಚಯಿಸಿತು ಎಂದು ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಬಿಎಪಿಎಸ್ ಸ್ವಾಮಿ ನಾರಾಯಣ ಸಂಸ್ಥೆಯ ಸ್ವಾಮಿ ಭದ್ರೇಶ್ ದಾಸ್, ಶ್ರೀಶೈಲ ಮಠದ ಶ್ರೀ ಚೆನ್ನಸಿದ್ದರಾಮ ಸ್ವಾಮೀಜಿ ಮೊದಲಾದವರಿದ್ದರು.