ಧರ್ಮಸ್ಥಳದಲ್ಲಿ ಏ.14ರಿಂದ ನಡೆಯುತ್ತಿರುವ ಕಾಲಾವಧಿ ಜಾತ್ರೆ ಅಂಗವಾಗಿ ಏ.21ರಂದು ಮಂಗಳವಾರ ರಾತ್ರಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಬ್ರಹ್ಮರಥೋತ್ಸವ ಸಕಲ ವೈಭವದೊಂದಿಗೆ ನಡೆಯಿತು.
ನಾಡಿನಾದ್ಯಂತದಿಂದ ಆಗಮಿಸಿದ ಸಾವಿರಾರು ಮಂದಿ ಭಕ್ತಾದಿಗಳು ಮಹೋತ್ಸವದಲ್ಲಿ ಭಾಗವಹಿಸಿದ್ದರು.