ಬಸ್- ಲಾರಿ ಢಿಕ್ಕಿ: ಈರ್ವರ ಸಾವು, ಹಲವರಿಗೆ ಗಾಯ

ಲೋಕಬಂಧು ನ್ಯೂಸ್ ಕುಂದಾಪುರ, ಏ.29
ಬೈಂದೂರು ಸಮೀಪದ ಮರವಂತೆ ಸಮುದ್ರ ಕಿನಾರೆ ಎದುರಿನ‌ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ಮಧ್ಯಾಹ್ನ ಬಸ್ಸು ಹಾಗೂ ಲಾರಿ ಢಿಕ್ಕಿ ಸಂಭವಿಸಿದ್ದು ಬಸ್ಸಿನಲ್ಲಿ‌ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.ದುರಂತಕ್ಕೆ ಕಾರಣವಾದ ಬಸ್ಸಿನಲ್ಲಿ ಶಿವಮೊಗ್ಗ ಶಂಕರ ಘಟ್ಡದ ಜಗದ್ಗುರು ರಂಭಾಪುರಿ ಕಲಾ ಮತ್ತು  ವಾಣಿಜ್ಯ ಕಾಲೇಜಿನ‌  47 ಮಂದಿ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.


ಘಟನಾ ಸ್ಥಳಕ್ಕೆ ಎಸ್ಪಿ ಹರಿರಾಮ್ ಶಂಕರ್, ಡಿವೈಎಸ್ಪಿ ಎಚ್. ಡಿ‌. ಕುಲಕರ್ಣಿ, ಪಿಎಸ್ಐ ಪವನ್‌ ನಾಯ್ಕ್ ಭೇಟಿ‌ ನೀಡಿದ್ದಾರೆ.