ಧರ್ಮಸ್ಥಳದಲ್ಲಿ ಚಂದ್ರಮಂಡಲ ರಥೋತ್ಸವ

ಲೋಕಬಂಧು ನ್ಯೂಸ್ | ಉಜಿರೆ, ಏ.24
ಧರ್ಮಸ್ಥಳದಲ್ಲಿ ಏ.14ರಿಂದ ನಡೆಯುತ್ತಿರುವ ಕಾಲಾವಧಿ ಜಾತ್ರೆ ಪ್ರಯುಕ್ತ ಏ.20ರಂದು ಸೋಮವಾರ ರಾತ್ರಿ ಚಂದ್ರಮಂಡಲ ರಥ ಉತ್ಸವ ನಡೆಯಿತು.
ನಾಡಿನೆಲ್ಲೆಡೆಯಿಂದ ಸಾವಿರಾರು ಭಕ್ತರು ಉತ್ಸವವನ್ನು ಶ್ರದ್ಧಾ-ಭಕ್ತಿಯಿಂದ ವೀಕ್ಷಿಸಿ ಕಣ್ತುಂಬಿಕೊಂಡರು.