ಲೋಕಬಂಧು ನ್ಯೂಸ್ | ಉಡುಪಿ, ಏ.24
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗ್ರಾಮ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸದಾನಂದ (54) ಅವರು ಡಿಸಿ ಕಚೇರಿ ಹಿಂಬದಿ ಕಂಪೌಂಡ್ ಒಳಗಡೆ ಇರುವ ಮಾವಿನ ಮರದಿಂದ ಮಾವಿನ ಹಣ್ಣುಗಳನ್ನು ತೆಗೆಯಲು ಮರ ಹತ್ತಿ ಕಬ್ಬಿಣದ ಕೊಕ್ಕೆಯಿಂದ ಮಾವಿನ ಹಣ್ಣು ತೆಗೆಯುತ್ತಿದ್ದಾಗ ಮರದ ಮೇಲ್ಬಾಗದಲ್ಲಿ ಹಾದುಹೋಗಿರುವ ಹೈಟೆನ್ಶನ್ ವಿದ್ಯುತ್ ತಂತಿ ಕಬ್ಬಿಣದ ಕೊಕ್ಕೆಗೆ ತಾಗಿ ವಿದ್ಯುತ್ ಶಾಕ್'ನಿಂದ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.
ಸದಾನಂದ ಅವರು ಕಬ್ಬಿಣದ ಕೊಕ್ಕೆ ಸಮೇತ ಮಾವಿನ ಮರದ ಕೊಂಬೆಯ ಮೇಲೆ ಬಿದ್ದಿದ್ದು, ಅವರನ್ನು ಚಿಕಿತ್ಸೆಗಾಗಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.
ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
