ಲೋಕಬಂಧು ನ್ಯೂಸ್ | ಬೈಂದೂರು, ಏ.25
ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಖ್ಯಾತ ರೌಡಿ, ಗರುಡ ಗ್ಯಾಂಗ್ ಸಕ್ರಿಯ ಸದಸ್ಯ ಮಹಮ್ಮದ್ ಅಲ್ಫಾಜ್‌ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ.
ಆತನ ವಿರುದ್ದ ಉಡುಪಿ ಜಿಲ್ಲೆಯ ಶಿರ್ವ, ಗಂಗೊಳ್ಳಿ, ಬೈಂದೂರು, ಉಡುಪಿ ನಗರ, ಕುಂದಾಪುರ ಗ್ರಾಮಾಂತರ, ಕುಂದಾಪುರ ನಗರ ಠಾಣೆಯಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರ ಠಾಣೆಗಳಲ್ಲಿ ಕೊಲೆ ಯತ್ನ 2, ದರೋಡೆ 1, ದರೋಡೆ ಯತ್ನ 1, ಹಲ್ಲೆ 1, ಅಕ್ರಮ ಕೂಟ 2, ಅಪಹರಣ 1, ಮಾದಕ ವಸ್ತು ಮಾರಾಟ 1 ಹಾಗೂ ಇತರ ಪ್ರಕರಣ 1 ಸೇರಿದಂತೆ ಒಟ್ಟು 10 ಪ್ರಕರಣ ದಾಖಲಾಗಿದೆ.
ಅವುಗಳ ಪೈಕಿ 1 ಪ್ರಕರಣ ಖುಲಾಸೆ, 8 ಪ್ರಕರಣ ನ್ಯಾಯಾಲಯ ವಿಚಾರಣೆ, ಉಳಿದ ಒಂದು ಪ್ರಕರಣ ತನಿಖೆಯಲ್ಲಿದೆ.
ಗೂಂಡಾ ಕಾಯ್ದೆಯಡಿ ಆತನ ಬಂಧನ ಬಗ್ಗೆ ಆದೇಶಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನವಿ ಮೇರೆಗೆ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಶುಕ್ರವಾರ ಆದೇಶಿಸಿದ್ದು ಆತನನ್ನು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲಾಗಿದೆ.
