ಪುತ್ತಿಗೆ ಸುಗುಣ ಶಿಬಿರಕ್ಕೆ ಚಾಲನೆ

ಲೋಕಬಂಧು ನ್ಯೂಸ್ ಉಡುಪಿ, ಏ.21
ಸನಾತನ ಹಿಂದೂ ಸಂಸ್ಕೃತಿಯ ಸಂರಕ್ಷಣೆ- ಸಂವರ್ಧನೆಗಾಗಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಮಾರ್ಗದರ್ಶನ ಮತ್ತು ಉಪಸ್ಥಿತಿಯಲ್ಲಿ ಗೀತಾ ಮಂದಿರದ ನೃಸಿಂಹ ಸಭಾಭವನದಲ್ಲಿ ಶ್ರೀ ಪುತ್ತಿಗೆ ಸುಗುಣ ಶಿಬಿರ ಉದ್ಘಾಟನೆ ಈಚೆಗೆ ನೆರವೇರಿತು.ಮುಖ್ಯ ಅತಿಥಿಗಳಾಗಿ ಶಾಸಕ ಯಶಪಾಲ್ ಸುವರ್ಣ, ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜರ್ಷಿ ವಾಸುದೇವ ಶೆಟ್ಟಿ ಹಾಗೂ ಶ್ರೀನಿವಾಸ ಯುನಿವರ್ಸಿಟಿ ಕುಲಪತಿ ಡಾ. ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.


ಕೆ.ವಿ.ರಮಣ ಆಚಾರ್ಯ ಹಾಗೂ ರಮೇಶ್ ಭಟ್ ನಿರೂಪಿಸಿದರು.