ಯುದ್ಧ ನಿಲ್ಲಲಿ ಶಾಂತಿ ನೆಲೆಸಲಿ

ಲೋಕಬಂಧು ನ್ಯೂಸ್ ಉಡುಪಿ, ಏ.11
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧ ಕೊನೆಗೊಂಡು ಶಾಂತಿ ನೆಲೆಸಲಿ ಎಂದು ಹಾರೈಸಿ ಯುವಕನೋರ್ವ ಮೌನದ ಮೂಲಕ ಪ್ರಬಲ ಸಂದೇಶ ನೀಡಲು ಮುಂದಾಗಿದ್ದಾರೆ.ಕುಂದಾಪುರದ ಅಂತಾರಾಷ್ಟ್ರೀಯ ದುಡಿಯುವ ಮಕ್ಕಳ ಸಂಸ್ಥೆ ‘ನಮ್ಮ ಭೂಮಿ’ಯ ಪ್ರತಿನಿಧಿ, ಮಕ್ಕಳ ಹಕ್ಕುಗಳ ಹೋರಾಟಗಾರ, ರಂಗಭೂಮಿ ಕಲಾವಿದ ಹಾಗೂ ಕನ್ನಡ ಉಪನ್ಯಾಸಕ ರಾಮಾಂಜಿ, ಕಳೆದ ಒಂದು ತಿಂಗಳಿಂದ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಸಂಬಂಧಿ ಘಟನೆಗಳನ್ನು ಗಮನಿಸಿ ಮನನೊಂದು ಮಾನವ ಜನಾಂಗದ ಮೇಲೆ ನಡೆಯುತ್ತಿರುವ ಹಿಂಸೆ ಹಾಗೂ ಪ್ರಕೃತಿಯ ಮೇಲೆ ಆಗುತ್ತಿರುವ ದಬ್ಬಾಳಿಕೆಗೆ ವಿರೋಧ ವ್ಯಕ್ತಪಡಿಸಿ ಶನಿವಾರ ನಗರದ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರಿನ ಗಾಂಧಿ ಪ್ರತಿಮೆ ಬಳಿ ಮೌನ ಧರಣಿ ಆರಂಭಿಸಿದ್ದಾರೆ.


ಯಾವುದೇ ಘೋಷಣೆಗಳನ್ನು ಕೂಗದೇ ಕೇವಲ ಮೌನದ ಮೂಲಕ ಬೆಳಿಗ್ಗೆಯಿಂದ ಸಂಜೆ ವರೆಗೆ ಯುದ್ಧ ವಿರೋಧದ ಸಂದೇಶ ಸಾರಿದರು.