ಲೋಕಬಂಧು ನ್ಯೂಸ್ | ಉಡುಪಿ, ಏ.12
ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಅಂಗವಾಗಿ ವೈಭವದ ದೀಪಾಲಂಕಾರವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಶನಿವಾರ ಸಂಜೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಎಲ್ಲಿ ನಾವು ದೀಪವನ್ನು ಬೆಳಗುತ್ತೇವೊ ಅಲ್ಲಿ ಭಗವಂತನ ಸಾನಿಧ್ಯ ಇರುತ್ತದೆ. ಭಗವಂತನಲ್ಲಿ ನಮ್ಮ ಕಷ್ಟವನ್ನು ತೋಡಿಕೊಂಡಾಗ ಸಮಸ್ಯೆ ಪರಿಹಾರವಾಗುತ್ತದೆ.
ಭಗವಂತನನ್ನು ತೃಪ್ತಿಗೊಳಿಸುವ ಸಲುವಾಗಿ ಬ್ರಹ್ಮಕಲಶ ನಡೆಯುತ್ತಿದ್ದು ಭಕ್ತಾದಿಗಳೆಲ್ಲರೂ ಸೇರಿ ದೇವರ ಸೇವೆ ಮಾಡುವ ಮೂಲಕ ಅದನ್ನು ಯಶಸ್ವಿಗೊಳಿಸಬೇಕು. ದೇವರ ಕಾರ್ಯವನ್ನು ಎಲ್ಲೇ ಹಮ್ಮಿಕೊಂಡರೂ ಭಕ್ತರು ತಮ್ಮ ಸೇವೆಯನ್ನು ತನು ಮನ ಧನದ ಮೂಲಕ ನೀಡಿ ಯಶಸ್ವಿಗೊಳಿಸುತ್ತಾರೆ ಎಂದರು.
ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಾಧವ ಪೂಜಾರಿ ಬನ್ನಂಜೆ, ದೇವಸ್ಥಾನದ ಪ್ರಧಾನ ಅರ್ಚಕ ವಾಸುದೇವ ಉಪಾಧ್ಯಾಯ, ಹಿರಿಯರಾದ ಭುಜಂಗ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ರಮೇಶ್ ಕಾಂಚನ್, ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಗಣೇಶೋತ್ಸವ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಭಕ್ತಾದಿಗಳು ಇದ್ದರು.
ಕೃತಿ ಮೂಡಬೆಟ್ಟು ನಿರೂಪಿಸಿದರು.
.jpg)
.jpg)