ಪಲಿಮಾರು ಶ್ರೀ ಸಪ್ತತಿ‌ ಮಹೋತ್ಸವ

ಲೋಕಬಂಧು ನ್ಯೂಸ್ | ಪಡುಬಿದ್ರಿ, ಏ.24
ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಸಪ್ತತಿ (70ನೇ ವರ್ಧಂತಿ) ಮಹೋತ್ಸವ ಏ.23ರಂದು ಗುರುವಾರ ಪಲಿಮಾರು ಮೂಲಮಠದಲ್ಲಿ ನಡೆಯಿತು.
ಕಾರ್ಯಕ್ರಮದಂಗವಾಗಿ ವಿರಜಾಹೋಮ, ತತ್ವಹೋಮ, ಮೃತ್ಯುಂಜಯ ಹೋಮ, ಧನ್ವಂತರಿ ಹೋಮ, ಹಾಗೂ ತತ್ತ್ವಕಲಶಾಭಿಷೇಕ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನೆರವೇರಿತು.