ಲೋಕಬಂಧು ನ್ಯೂಸ್ | ಉಡುಪಿ, ಏ.12
ಶ್ರೀಮಜ್ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿ ಅಂಗವಾಗಿ ಉಡುಪಿಯ ಎಲ್ಲೂರು ಲಕ್ಷ್ಮೀನಾರಾಯಣ ರಾವ್ ಜ್ಯೋತಿಷ್ಕ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ (ರಿ) ಹಾಗೂ ಇಂಚರ ಸರ್ಜಿಕಲ್ ಕ್ಲಿನಿಕ್ ಸಹಯೋಗದೊಂದಿಗೆ ಪ್ರೌಢಶಾಲೆ, ಪಿಯುಸಿ ಹಾಗೂ ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.
8,9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಶ್ರೀ ಆದಿ ಶಂಕರಾಚಾರ್ಯರ ಸಂಕ್ಷಿಪ್ತ ಜೀವನ ಚರಿತ್ರೆ ಹಾಗೂ ಭಾರತ ದೇಶದ ಅಖಂಡತೆಯ ರಕ್ಷಣೆಯಲ್ಲಿ ಅವರ ಕೊಡುಗೆ, ಪಿಯುಸಿ ಹಾಗೂ ಡಿಗ್ರಿ ವಿದ್ಯಾರ್ಥಿಗಳಿಗೆ ಆದಿ ಶಂಕರಚಾರ್ಯರು ತೋರಿಸಿದ ಉಪನಿಷದ್ ವಾಕ್ಯ- ಅಹಂ ಬ್ರಹ್ಮಾಸ್ಮಿ'ಯನ್ನು ಜನರೇಶನ್ ಜಿ ಅರ್ಥೈಸಿಕೊಂಡು ಜೀವನದಲ್ಲಿ ಸಾರ್ಥಕತೆ ಪಡೆಯುವ ಬಗೆ ವಿಷಯ ಕುರಿತು ಸ್ಪಹಸ್ತಾಕ್ಷರದಲ್ಲಿ ಬರೆದ ಪ್ರಬಂಧವನ್ನು ಡಾ. ವೈ. ಸುದರ್ಶನ ರಾವ್, ಇಂಚರ ಸರ್ಜಿಕಲ್ ಕ್ಲಿನಿಕ್, ಎ.ಜೆ. ಆಲ್ಸೆ ರಸ್ತೆ, ಉಡುಪಿ 576 101 ಈ ವಿಳಾಸಕ್ಕೆ ಏ. 15ರೊಳಗೆ ಕಳಿಸಬೇಕು.
ಅಭ್ಯರ್ಥಿಯ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಹಾಗೂ ಕಲಿಯುತ್ತಿರುವ ತರಗತಿ ತಪ್ಪದೇ ನಮೂದಿಸೇಕು. ಜಾತಿ ಮತ ಭೇದವಿಲ್ಲದೆ ಎಲ್ಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಪ್ರಬಂಧವನ್ನು ಕನ್ನಡ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಬರೆಯಬಹುದು. ಲೇಖನ 500 ಪದಗಳಿಗಿಂತ ಹೆಚ್ಚಿರಬೇಕು ಮತ್ತು ಎರಡು ಸಾವಿರ ಪದಗಳ ಒಳಗಿರಬೇಕು.
ಎಲ್ಲಾ ಸ್ಪರ್ಧಾಳುಗಳಿಗೂ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ 5 ಸಾವಿರ ಹಾಗೂ ದ್ವಿತೀಯ 4 ಸಾವಿರ ಮತ್ತು ತೃತೀಯ ಬಹುಮಾನ 3 ಸಾವಿರ ಹಾಗೂ ಪ್ರಶಸ್ತಿ ಫಲಕ ನೀಡಲಾಗುವುದು.
ಏ.21ರಂದು ಸಂಜೆ ಕುಂಜಿಬೆಟ್ಟು ಶ್ರೀ ಶಾರದಾ ಮಂಟಪದಲ್ಲಿ ನಡೆಯುವ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು.
