ಧರ್ಮಾನುಸರಣೆಯಿಂದ ಜೀವನದಲ್ಲಿ ಶ್ರೇಯಸ್ಸು

ಲೋಕಬಂಧು ನ್ಯೂಸ್ | ಉಡುಪಿ, ಏ.24
ಇತರ ಜೀವಿಗಳಿಗಿಂತ ಭಿನ್ನವಾಗಿ ಅಪೂರ್ವ ಬುದ್ಧಿಶಕ್ತಿಯುಳ್ಳ ಮಾನವ ತನ್ನ ಜೀವನದಲ್ಲಿ ಧರ್ಮವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಸು ನಡೆದಾಗ ಜೀವನದಲ್ಲಿ ಸಾರ್ಥಕ್ಯವನ್ನು ಕಾಣಬಹುದು ಹಾಗೂ ತನ್ಮೂಲಕ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸು ಗಳಿಸಲು ಸಾಧ್ಯ ಎಂದು ವಿದ್ವಾನ್ ಡಾ. ರಾಘವೇಂದ್ರ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬ್ರಾಹ್ಮಣ ಮಹಾಸಭಾ ಪುತ್ತೂರು ಆಶ್ರಯದಲ್ಲಿ ನಡೆದ ತಿಂಗಳ ಕಾರ್ಯಕ್ರಮ ಅಂಗವಾಗಿ ಉಡುಪಿ ಪುತ್ತೂರಿನ ಶ್ರೀ ಭಗವತಿ ಸಭಾಗೃಹದಲ್ಲಿ ಈಚೆಗೆ ನಡೆದ `ಯಶಸ್ಸಿಗಾಗಿ ಜೀವನ ಧರ್ಮ' ವಿಷಯ ಬಗ್ಗೆ ಉಪನ್ಯಾಸ ನೀಡಿದರು.


ಆಪದ್ಬಾಂಧವ ಸೇವಾ ಸಮಿತಿ ವತಿಯಿಂದ ಡಾ.ಪ್ರಜ್ಞಾಮಿ ಅನಿಲ್ ನೇತೃತ್ವದಲ್ಲಿ ಉಚಿತ ವೈದ್ಯಕೀಯ ತಪಾಸಣೆ ನಡೆಸಲಾಯಿತು ಮತ್ತು ಅಶಕ್ತರಿಗೆ ವೈದ್ಯಕೀಯ ವೆಚ್ಚಕ್ಕಾಗಿ 50 ಸಾವಿರ ರೂ. ಸಹಾಯಧನ ಹಸ್ತಾಂತರಿಸಲಾಯಿತು.


ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಚಂದ್ರಶೇಖರ ಅಡಿಗ ಸ್ವಾಗತಿಸಿದರು. ಆಪದ್ಬಾಂಧವ ಸೇವಾ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಜೋಷಿ, ಮಹಾಸಭಾದ ಕೋಶಾಧಿಕಾರಿ ಕೆ.ಜಿ. ರಾಮಚಂದ್ರ ರಾವ್ ಉಪಸ್ಥಿತರಿದ್ದರು.


ಶ್ರೀಲಕ್ಷ್ಮೀ ತೆಂಕಿಲ್ಲಾಯ, ಮಂಜುಳಾ ವಿ.ಪ್ರಸಾದ್, ಶಶಿರೇಖಾ ರಾವ್, ವಿಜಯಕುಮಾರ್, ಚೈತನ್ಯ ಎಂ.ಜಿ. ಸಹಕರಿಸಿದರು.


ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ನಿರಂಜನ ಭಟ್ ನಿರೂಪಿಸಿ, ವಂದಿಸಿದರು.


ಈ ಸಂದರ್ಭದಲ್ಲಿ ಡಾ.ರಾಘವೇಂದ್ರ ರಾವ್ ಅವರನ್ನು ಮಹಾಸಭಾ ವತಿಯಿಂದ ಗೌರವಿಸಲಾಯಿತು.