ಲೋಕಬಂಧು ನ್ಯೂಸ್ ಉಡುಪಿ, ಏ.22
ಸೂಕ್ಷ್ಮ ಸಂವೇದನೆಯ ಲೇಖಕರಿಗೆ ಕೋಲ್ಕತಾದ ಭಾರತೀಯ ಭಾಷಾ ಪರಿಷತ್ ನೀಡುವ ಪ್ರತಿಷ್ಠಿತ 'ಕರ್ತೃತ್ವ ಸಮಗ್ರ ಸಮ್ಮಾನ್' ಪ್ರಶಸ್ತಿಗೆ ಕನ್ನಡದ ಲೇಖಕಿ ವೈದೇಹಿ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಒಂದು ಲಕ್ಷ ರೂ. ಗೌರವಧನದೊಂದಿಗೆ ಪದಕ ಒಳಗೊಂಡಿದೆ. ಮೇ 1ರಂದು ಬಂಗಾಳಿ ಲೇಖಕ ರಾಮ್ ಕುಮಾರ್ ಮುಖೋಪಾಧ್ಯಾಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.