ಮೇ 3: ಮಹಾಗಣಪತಿ ಬ್ರಹ್ಮಕುಂಭಾಭಿಷೇಕ

ಲೋಕಬಂಧು ನ್ಯೂಸ್ | ಪಡುಬಿದ್ರಿ, ಮೇ 3
ನವೀಕರಣಗೊಂಡು ಶಿಲಾಮಯ‌ ದೇಗುಲದಲ್ಲಿ ಪುನಃಪ್ರತಿಷ್ಠಾಪನೆಗೊಂಡಿರುವ ಶ್ರೀ ಮಹಾಗಣಪತಿ ದೇವರಿಗೆ ಮೇ 3ರಂದು ಬ್ರಹ್ಮಕುಂಭಾಭಿಷೇಕ ನಡೆಯಲಿದೆ.
ಭಾನುವಾರ ಬೆಳಿಗ್ಗೆ ಘಂಟೆ 6ರಿಂದ ಕವಾಟೋದ್ಘಾಟನೆ, ದಂತಧಾವನಾದಿ ಪ್ರಕ್ರಿಯೆಗಳು, ಸುವರ್ಣೋತ್ಸವ, ಅಷ್ಟೋತ್ತರ ಶತ ನಾರಿಕೇಲ ಗಣಯಾಗ, ಮಹಾರುದ್ರ ಯಾಗ, ಗಣಪತಿ ದೇವರ ಬ್ರಹ್ಮಕುಂಭ ಸಹಿತ ತ್ರಿಶತ ಕಲಶಾಧಿವಾಸ, ಅಧಿವಾಸ ಯಾಗ ನಡೆಯಲಿದೆ.


ಪೂರ್ವಾಹ್ನ 9.49ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮಕುಂಭಾಭಿಷೇಕ ನಡೆಯಲಿದೆ.