ಪಡುಬಿದ್ರಿ ಮಹಾಗಣಪತಿ ಪ್ರತಿಷ್ಠೆ

ಲೋಕಬಂಧು ನ್ಯೂಸ್, ಪಡುಬಿದ್ರಿ, ಏ.30
ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಗುರುವಾರ ಬೆಳಿಗ್ಗೆ ವೃಷಭಲಗ್ನ ಸುಮುಹೂರ್ತದಲ್ಲಿ ಭಕ್ತರ ಇಷ್ಟಾರ್ಥ ಸಿದ್ಧಿಯ ಜಗದ್ವಿಖ್ಯಾತ ಮಹಾಗಣಪತಿಯನ್ನು ಬಾಲಾಲಯದಿಂದ ಮತ್ತೆ ನೂತನ ಶಿಲಾಮಯ ಗರ್ಭಗುಡಿಯಲ್ಲಿ ದೇವಳದ ತಂತ್ರಿಗಳಾದ ಕಂಬ್ಳಕಟ್ಟ ವೇ.ಮೂ. ರಾಧಾಕೃಷ್ಣ ಉಪಾಧ್ಯಾಯ ಪುನಃಪ್ರತಿಷ್ಠಾಪಿಸಿದರು.ಬುಧವಾರ ಸಂಜೆ ಬಾಲಾಲಯದಿಂದ ದೇಗುಲ ಸಮುಚ್ಚಯಕ್ಕೆ ತರಲಾಗಿದ್ದ ಶ್ರೀ ಗಣಪತಿಗೆ ಬಿಂಬಶಯ್ಯಾ ಕಲ್ಪನೆಯೊಂದಿಗೆ ಅಧಿವಾಸ ಹೋಮ, ನ್ಯಾಸಾದಿಗಳನ್ನು ನೆರವೇರಿಸಲಾಯಿತು. ಗುರುವಾರ ಬೆಳಿಗ್ಗೆ ಶ್ರೀ ಗಣಪತಿ ದೇವರ ಪ್ರತಿಷ್ಠಾ ಯಾಗ, ಕಲಶ ಪೂಜೆ ನೆರವೇರಿಸಿದ ಬಳಿಕ ಶ್ರೀ ಮಹಾಗಣಪತಿ ದೇವರ ಶಿಲಾಮಯ ಮೂರ್ತಿಯನ್ನು ಕಲಶ ಸಹಿತ ಗರ್ಭಗುಡಿಯೊಳಕ್ಕೆ ಒಯ್ದು ಅಷ್ಟಬಂಧ ಲೇಪನ, ಕಲಶಾಭಿಷೇಕ ನೆರವೇರಿಸಿ ಶ್ರೀ ದೇವರ ಪುನಃಪ್ರತಿಷ್ಠೆ, ಪ್ರಸನ್ನ ಪೂಜೆಯನ್ನು ಶ್ರೀಕ್ಷೇತ್ರದ ತಂತ್ರಿಗಳಾದ ವೇ.ಮೂ‌. ರಾಧಾಕೃಷ್ಣ ಉಪಾಧ್ಯಾಯ ಅವರು ನೆರವೇರಿಸಿದರು.

ಆಚಾರ್ಯ ದಕ್ಷಿಣೆ, ಪ್ರತಿಜ್ಞಾ ವಿಧಿಗಳ ಬಳಿಕ ಧ್ವಜದೇವತಾ ಪ್ರತಿಷ್ಠೆ, ಬಲಿಯ ಬಳಿಕ ಬ್ರಹ್ಮಕಲಶೋತ್ಸವ ಕಾಲದ ಶ್ರೀ ದೇವರ ಧ್ವಜಾರೋಹಣ ನಡೆಯಿತು.


ಕಲಶಾಭಿಷೇಕದೊಂದಿಗೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಮಹಾಪೂಜೆ, ಪಲ್ಲಪೂಜೆ, ಬಲಿ ಹಾಗೂ ಮಧ್ಯಾಹ್ನ ಮಹಾ ಅನ್ನಸಂತರ್ಪಣೆಯೂ ನೆರವೇರಿತು.


ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ, ಆನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂತರ ಹೆಗ್ಡೆ, ಕೊರ್ನಾಯ ಶ್ರೀಪತಿ ರಾವ್, ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ, ಅರ್ಚಕರಾದ ಎಚ್. ಪದ್ಮನಾಭ ಭಟ್, ವೈ. ಗುರುರಾಜ ಭಟ್ ಮತ್ತು ಗಣಪತಿ ಭಟ್, ಅಶಾ ಪ್ರಕಾಶ್ ಶೆಟ್ಟಿ, ಕೊರ್ನಾಯ ಪದ್ಮನಾಭ ರಾವ್, ಶಕುಂತಳಾ ಬಿ. ಹೆಗ್ಡೆ, ಕೃಷ್ಣಾಪುರ ಶಾಖಾ ಮಠದ ಶ್ರೀನಿವಾಸ ಉಪಾಧ್ಯಾಯ,  ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಪಿ. ರವೀಂದ್ರನಾಥ ಜಿ. ಹೆಗ್ಡೆ, ಸಂತೋಷ್ ಕುಮಾರ್ ಶೆಟ್ಟಿ, ಸಂಪತ್ ಆಚಾರ್ಯ, ರಘು ಎಲ್. ಶೆಟ್ಟಿ ಮುಂಬಯಿ, ಅಶೋಕ್ ಶೆಟ್ಟಿ ಮುಂಬಯಿ, ಡಾ‌. ರತ್ನಾಕರ ಶೆಟ್ಟಿ ಮುಂಬಯಿ, ಪುರುಷೋತ್ತಮ ಶೆಟ್ಟಿ ಇನ್ನ, ಚಂದ್ರಶೇಖರ್ ಸುಬ್ಬಯ್ಯ ಶೆಟ್ಟಿ, ಅರುಣ್ ಸುಬ್ಬಯ್ಯ ಶೆಟ್ಟಿ, ಭರತ್ ದೇವಾಡಿಗ, ಭರತ್ ಕುಮಾರ್ ಬೀಡು, ಸತೀಶ್ ಶೆಟ್ಟಿ ಮುಂಬಯಿ, ವಿಜಯ ಎಸ್. ಶೆಟ್ಟಿ,  ವಿಷ್ಣುಮೂರ್ತಿ ಆಚಾರ್ಯ, ಅಶೋಕ್ ಸಾಲ್ಯಾನ್, ಸುಕುಮಾರ್ ಶ್ರೀಯಾನ್, ಹರೀಶ್ ಕುಮಾರ್, ಶ್ರೀನಾಥ್ ಹೆಗ್ಡೆ, ವೈ. ಸುಕುಮಾರ್, ನವೀನಚಂದ್ರ ಜೆ. ಶೆಟ್ಟಿ, ವೈ.ಎನ್.ರಾಮಚಂದ್ರ ರಾವ್, ನವೀನ್ ಎನ್. ಶೆಟ್ಟಿ, ಮಾಧವ ಶೆಟ್ಟಿ, ಅನಂತ್ರಾಜ ರಾವ್ ಬೆಂಗಳೂರು,  ಪ್ರೇಮನಾಥ ಶೆಟ್ಟಿ,  ಮುರಳೀನಾಥ ಶೆಟ್ಟಿ, ಶೇಖರ ಶೆಟ್ಟಿ, ಗುತ್ತಿನಾರ್ ಕೃಷ್ಣ ಶೆಟ್ಟಿ, ಉದಯ ಶೆಟ್ಟಿ ದಾರಡಗುತ್ತು, ಪೇಟೆಮನೆ ಪ್ರಕಾಶ್ ಶೆಟ್ಟಿ, ಸುನಿಲ್ ಶೆಟ್ಟಿ, ಮಿಥುನ್ ಹೆಗ್ಡೆ, ಜಯ ಶೆಟ್ಟಿ ಪದ್ರ ಮೊದಲಾದವರಿದ್ದರು.