ಕರ್ನಾಟಕ ರಾಜ್ಯ ಎಫ್‌ಐಪಿ 8ನೇ ಪಾಲುದಾರರ ಸಭೆ

ಲೋಕಬಂಧು ನ್ಯೂಸ್ ಕಾಪು, ಮೇ 11
ಕರ್ನಾಟಕ ರಾಜ್ಯ ಮೀನುಗಾರಿಕೆ ಸುಧಾರಣಾ ಯೋಜನೆ (ಎಫ್‌ಐಪಿ)ಯಡಿ ಸ್ಮಾಲ್ ಪೆಲಾಜಿಕ್ ಪರ್ಸ್ಸೈನ್ ಮೀನುಗಾರಿಕೆ ಯೋಜನೆಯ 8ನೇ ಪಾಲುದಾರರ ಸಭೆ ಎರ್ಮಾಳಿನ ಪೆನಿನ್ಸುಲಾ ಡೆಲ್ ಮಾರ್ ಬೀಚ್ ರೆಸಾರ್ಟ್'ನಲ್ಲಿ ಸೋಮವಾರ ನಡೆಯಿತು.ಅಧ್ಯಕ್ಷತೆಯನ್ನು ಆವಂತಿ ಫೀಡ್ಸ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಅಲ್ಲೂರಿ ಇಂದ್ರಕುಮಾರ್ ವಹಿಸಿದ್ದರು.


ಸಭೆಯಲ್ಲಿ ಸುಸ್ಥಿರ ಮೀನುಗಾರಿಕೆ, ಜವಾಬ್ದಾರಿಯುತ ಮೀನುಗಾರಿಕೆ ಪದ್ಧತಿ, ಸಮುದ್ರ ಆಹಾರದ ಪತ್ತೆಹಚ್ಚುವಿಕೆ ವ್ಯವಸ್ಥೆ ಹಾಗೂ ಭಾರತದ ಸಮುದ್ರ ಆಹಾರ ಸರಬರಾಜು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಸಲಾಯಿತು.


ಕಳೆದ ಎರಡು ವರ್ಷಗಳಿಂದ ಕರ್ನಾಟಕ ರಾಜ್ಯ ಮೀನುಗಾರಿಕೆ ಸುಧಾರಣಾ ಯೋಜನೆಯಡಿ ಅಪಾಯದಲ್ಲಿರುವ, ಅಪರೂಪದ ಹಾಗೂ ಸಂರಕ್ಷಿತ (ಇಟಿಪಿ) ಮತ್ಸ್ಯ ಸಂತತಿಯ ಸಂರಕ್ಷಣೆ, ಜವಾಬ್ದಾರಿಯುತ ಮೀನುಗಾರಿಕೆ, ಸ್ವಚ್ಛತೆ, ಕಾರ್ಮಿಕರ ಕಲ್ಯಾಣ ಹಾಗೂ ಅನೈತಿಕ ಮೀನುಗಾರಿಕೆ ಪದ್ಧತಿಗಳ ತಡೆ ಕುರಿತು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಮೀನುಗಾರರು ಹಾಗೂ ಮೀನುಗಾರಿಕೆ ದೋಣಿಗಳಿಗೆ ಸಂರಕ್ಷಿತ ಮೀನು ಪ್ರಬೇಧಗಳ ಕುರಿತು ಜಾಗೃತಿ ಫಲಕಗಳನ್ನು ವಿತರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಎಫ್‌ಐಪಿನ ಮುಖ್ಯಸ್ಥ ಉದಯಕುಮಾರ್ ಸಾಲ್ಯಾನ್ ತಿಳಿಸಿದ್ದಾರೆ.


ಕಾರ್ಯಕ್ರಮದಲ್ಲಿ ಯೋಜನಾ ಸಂಯೋಜಕಿ ಡಾ.ನಿಮ್ನುವಲ್ ಪೀವ್ರೋಂಗ್ಗಾಮ್, ಐಸಿಎಆರ್- ಸಿಎಮ್‌ಎಫ್‌ಆರ್‌ಐ ಮಂಗಳೂರು ಕೇಂದ್ರದ ಮುಖ್ಯ ವಿಜ್ಞಾನಿ ಡಾ.ಸುಜಿತಾ ಥಾಮಸ್, ರಾಷ್ಟ್ರೀಯ ಕಾರ್ಯಪಡೆ ಸದಸ್ಯ ಗಣೇಶ್ ನಖವಾ, ದಕ್ಷಿಣ್ ಫೌಂಡೇಶನ್‌ನ ಡಾ.ನವೀನ್ ನಂಬೂದಿರಿ, ದೇವಿ ಸೀಫುಡ್ಸ್ ಲಿಮಿಟೆಡ್‌ನ ಸರಬ್ಜಿತ್ ಸಿಂಗ್, ಆವಂತಿ ಫೀಡ್ಸ್ ಲಿಮಿಟೆಡ್‌ನ ನಂದಕಿಶೋರ್ ಹಾಗೂ ಸೀಫುಡ್ ಟಾಸ್ಕ್ ಫೋರ್ಸ್‌ನ ಎ.ಬಿ. ಜೈನ್ ವಿವಿಧ ವಿಷಯಗಳ ಬಗ್ಗೆ ಮಾತನಾಡಿದರು.


ಕಾರ್ಯಕ್ರಮದಲ್ಲಿ ಭಾರತೀಯ ಫಿಶ್‌ಮಿಲ್ ಮತ್ತು ಮೀನು ಎಣ್ಣೆ ರಫ್ತುದಾರರ ಸಂಘದ ಗೌರವಾಧ್ಯಕ್ಷ ಪ್ರಮೋದ್ ಮಧ್ವರಾಜ್, ಮೀನುಗಾರಿಕಾ ಇಲಾಖೆಯ ಹೆಚ್ಚುವರಿ ನಿರ್ದೇಶಕ ಮಹೇಶ್ ಕುಮಾರ್ ಯು., ಎಂಪಿಇಡಿಎ ಉಪನಿರ್ದೇಶಕ ಮನೋಜ್ ಕುಮಾರ್ ಟಿ.ಜಿ. ಹಾಗೂ ಜನತಾ ಗ್ರೂಪ್‌ನ ಅಧ್ಯಕ್ಷ ಆನಂದ ಸಿ. ಕುಂದರ್ ಕೋಟ ಉಪಸ್ಥಿತರಿದ್ದರು.


ರಮೇಶ್ ಎಂ.ಆರ್. ಸ್ವಾಗತಿಸಿ, ಕಾರ್ಯಕ್ರಮದ ಉದ್ದೇಶ ವಿವರಿಸಿದರು. ಚೇತನ್ ಕುಮಾರ್ ಸುವರ್ಣ ವಂದಿಸಿದರು. ಡಾ.ಶಿವಕುಮಾರ್ ಮಗದ ಕಾರ್ಯಕ್ರಮ ನಿರೂಪಿಸಿದರು.


ಸಭೆಯಲ್ಲಿ ಸರಕಾರದ ವಿವಿಧ ಇಲಾಖೆಗಳು, ಸಂಶೋಧನಾ ಸಂಸ್ಥೆಗಳು, ಸಮುದ್ರ ಆಹಾರ ಕೈಗಾರಿಕೆ, ರಫ್ತುದಾರರು, ಸುಸ್ಥಿರ ಮೀನುಗಾರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಹಾಗೂ ಮೀನುಗಾರರ ಪ್ರತಿನಿಧಿಗಳು ಭಾಗವಹಿಸಿದ್ದರು.


ಉದ್ಯಾವರ ಯಶಸ್ವಿ ಫಿಶ್‌ಮಿಲ್ ಆ್ಯಂಡ್ ಆಯಿಲ್ ಕಂಪನಿ ಉಡುಪಿ, ಯಶಸ್ವಿ ಫಿಶ್‌ಮಿಲ್ ಆ್ಯಂಡ್ ಆಯಿಲ್ ಕಂಪನಿ ಎಸ್‌ಇಝೆಡ್ ಮಂಗಳೂರು, ಆಕಾಶ್ ಫಿಶ್‌ಮಿಲ್ ಆ್ಯಂಡ್ ಫಿಶ್ ಆಯಿಲ್ ಕಂಪನಿ ಪ್ರೈವೇಟ್ ಲಿಮಿಟೆಡ್, ಮುಕ್ಕ ಪ್ರೋಟೀನ್ಸ್ ಲಿಮಿಟೆಡ್, ರಾಜ್ ಫಿಶ್‌ಮಿಲ್ ಆ್ಯಂಡ್ ಆಯಿಲ್ ಕಂಪನಿ ಮಲ್ಪೆ, ಜನತಾ ಫಿಶ್‌ಮಿಲ್ ಆ್ಯಙಡ್ ಆಯಿಲ್ ಕಂಪನಿ ಕೋಟ ಹಾಗೂ ಬ್ಲೂ ಲೈನ್ಸ್ ಫುಡ್ಸ್ (ಇಂಡಿಯಾ) ಲಿಮಿಟೆಡ್ ಎಫ್‌ಐಪಿಯ ಸದಸ್ಯ ಸಂಸ್ಥೆಗಳಾಗಿ ಭಾಗವಹಿಸಿದ್ದವು.