ಲೋಕಬಂಧು ನ್ಯೂಸ್ | ಉಡುಪಿ, ಮೇ 7
ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಎಆರ್.ಎಸ್ಐ ನಾಗೇಶ್ ಎಂ. ಗುರುವಾರ ನಿಧನರಾದರು. ಅವರು ಕಳೆದ ಒಂದು ವರ್ಷದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು.
ಮೂಲತಃ ಕಿನ್ನಿಗೋಳಿ ಪದ್ಮನೂರಿನವರಾದ ಅವರು 1996ರಲ್ಲಿ ಮಂಗಳೂರಿನ ಡಿಎಆರ್.ನಲ್ಲಿ ನೇಮಕ ಹೊಂದಿದ್ದರು. ಹೊಸದಾಗಿ ಉಡುಪಿ ಜಿಲ್ಲೆ ರಚನೆಯಾದ ಸಂದರ್ಭದಲ್ಲಿ ಉಡುಪಿ ಜಿಲ್ಲೆಗೆ ವರ್ಗವಾಗಿದ್ದರು.
2016ರ ಡಿ.17ರಂದು ಎಆರ್.ಎಸ್ಐ ಹುದ್ದೆಗೆ ಪದೋನ್ನತಿ ಹೊಂದಿದ್ದರು.
ಮೃತರು ಪತ್ನಿ, ಈರ್ವರು ಮಕ್ಕಳನ್ನು ಅಗಲಿದ್ದಾರೆ.
